ನರೋಣಾದಲ್ಲಿ ಶುಕ್ರವಾರ ರಾಘವ ಚೈತನ್ಯ ರಥಯಾತ್ರೆಗೆ ಜಿ.ಪಂ. ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಚಾಲನೆ ನೀಡಿದರು.
ಕಲಬುರಗಿ: ಮಹಾಶಿವರಾತ್ರಿ ಪ್ರಯುಕ್ತ ಆಳಂದ ತಾಲೂಕಿನಲ್ಲಿ ಹಮ್ಮಿಕೊಳ್ಳಲಾದ ರಾಘವ ಚೈತನ್ಯ ರಥಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದನ್ನು ಹೈಕೋರ್ಟ್ನ ಕಲಬುರಗಿ ಪೀಠ ರದ್ದುಪಡಿಸಿದೆ.
ರಥಯಾತ್ರೆ ನಡೆಸಲು ಅನುಮತಿಸಿರುವ ಪೀಠ ಕೆಲ ಷರತ್ತುಗಳನ್ನು ವಿಧಿಸಿದೆ. ಹೈಕೋರ್ಟ್ ನ್ಯಾಯಾಧೀಶ ನ್ಯಾ. ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಪಡಿಸಿತು.
ಈ ಮೊದಲು ರಥಯಾತ್ರೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮನ್ನಿಸದೇ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಕಬಾಡೆ ಹಾಗೂ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎ. ಪಾಟೀಲ ವಕೀಲರು ಮತ್ತು ಜಿ.ಪಂ. ಮಾಜಿ ಉಪಾಧ್ಯಕ್ಷ ಹರ್ಷಾನಂದ ಸುಭಾಷ ಗುತ್ತೇದಾರ್ ಅವರು ಹೈಕೋರ್ಟ್ನಲ್ಲಿ ಎರಡು ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ನ್ಯಾ. ಶ್ರೀಶಾನಂದ ಅವರು ಶುಕ್ರವಾರ ಅರ್ಜಿಗಳ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಪಡಿಸಿ ರಥಯಾತ್ರೆಗೆ ಅನುಮತಿ ನೀಡಿದರು.
ರಥಯಾತ್ರೆ ಆರಂಭ
ಹೈಕೋರ್ಟ್ ಆದೇಶ ಹೊರಬೀಳುತ್ತದಂತೆಯೇ ನಿಗದಿಯಂತೆ ರಥಯಾತ್ರೆ ಆರಂಭಗೊAಡಿತು. ನರೋಣಾದಿಂದ ಹೊರಟ ರಥಯಾತ್ರೆ ರಾತ್ರಿ ಕಡಗಂಚಿಗೆ ಬಂದಿತು. ಯಾತ್ರಿಗಳು ಅಲ್ಲಿಯೇ ವಾಸ್ತವ್ಯ ಹೂಡಿದರು. ಶನಿವಾರ ರಥಯಾತ್ರ ಪ್ರಯಾಣ ಬೆಳೆಸಲಿದ್ದು ನಿಂಬರ್ಗಾ, ಭೂಸನೂರ, ಮಾಡಿಯಾಳ, ಯಳಸಂಗಿ, ಮಾದನಹಿಪ್ಪರ್ಗಾ, ಹಿರೋಳಿ, ಮಟಕಿ, ತಡೋಳಾ, ಖಜೂರಿ, ತಡಕಲ್, ಮುನಹಳ್ಳಿ ಮೂಲಕ ಸಾಗಿ ಮಾ. ೮ರಂದು ಆಳಂದ ಪಟ್ಟಣ ತಲುಪಲಿದೆ.
Comments are closed.