ನಗರದ ಆಳಂದ ರಸ್ತೆಯ ಕೆರಿಬೋಸಗಾ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಇಂದು ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ನಿವೃತ್ತ ಸಿಆರ್ ಪಿಎಫ್ ಯೋಧ ಮಾರುತಿ ಕಾಶಿನಾಥ ಘೋಡಕೆ (56) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ಮಾರುತಿ ಅವರು ಕಲಬುರಗಿಯತ್ತ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಮಹಾರಾಷ್ಟ್ರ ನೋಂದಣಿ ಹೊಂದಿದ ಲಾರಿ ಬೈಕ್ ಓವರ್ ಟೇಕ್ ಮಾಡಿ ಹೋಗುವಾಗ ಬೈಕ್ ಲಾರಿಯಡಿ ಸಿಲುಕಿದೆ.
Comments are closed.