Shubhashaya News

‘ನಿಗಮ ಮಂಡಳಿ’ ಪಟ್ಟಿ ಪ್ರಕಟ ಬೆನ್ನಲೇ ಕಾಂಗ್ರೆಸ್‌ನಲ್ಲಿ ‘ಭಿನ್ನಮತ ಸ್ಪೋಟ’: ವಿ.ಪರಿಷತ್ ಸದ್ಯಸರಿಂದ ಆಕ್ರೋಶ

ನಿಗಮ ಮಂಡಳಿ ಪಟ್ಟಿ ಪ್ರಕಟವಾದ ಬೆನ್ನಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟವಾಗಿದೆ. ವಿಧಾನ ಪರಿಷತ್ ಸದ್ಯಸರಿಂದ ಆಕ್ರೋಶವಾಗುತ್ತಿದ್ದು, ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ನಮನ್ನು ಸಚಿವರಾಗಿ ಆಯ್ಕೆ ಮಾಡುತ್ತೀರಾ ಅಂದುಕೊಂಡಿದ್ದೇವು, ಆದರೆ ನಮಗೆ ಸಚಿವ ಸ್ಥಾನವನ್ನು ಕೂಡ ಕೊಟ್ಟಿಲ್ಲ. ಇದಲ್ಲದೇ ನಿಗಮ ಮಂಡಳಿ ಸ್ಥಾನವನ್ನು ನೀಡಿಲ್ಲ ಅಂತ ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಹಲವು ಮಂದಿ ಶಾಸಕರು ಕೂಡ ನಿಗಮ ಮಂಡಳಿಯ ಸ್ಥಾನವನ್ನುಒಪ್ಪಿಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ.

ಈ ನಡುವೆ ಮೂವರು ಶಾಸಕರು ನಮಗೆ ನಿಗಮ ಸ್ಥಾನ ಬೇಡ ಅಂತ ಹೇಳಿದ್ದು, ಹಂಪನಗೌಡ ಬಾದರ್ಲಿ, ಕೂಡ ನಮಗೆ ನಿಗಮ ಮಂಡಳಿ ಸ್ಥಾನ ಬೇಡ, ನಾನು ಐದು ಬಾರಿ ಗೆದ್ದಿರುವ, ನನಗೆ ಕೊಟ್ಟರೇ ಸಚಿವ ಸ್ಥಾನವನ್ನುಕೊಡಿ, ಇಲ್ಲವಾದಲ್ಲಿ ನನಗೆ ಯಾವುದು ಬೇಡವೇ ಬೇಡ ಅಂತ ತಮ್ಮ ಅಸಮಾಧನವನ್ನು ಹೊರ ಹಾಕಿದ್ದಾರೆ.

Comments are closed.

Don`t copy text!