Shubhashaya News

ವಾರಿಯರ್ಸ್‍ಗೆ ಊಟದ ಪ್ಯಾಕೇಟ್, ನೀರಿನ ಬಾಟಲ್ ವಿತರಣೆ

ಚಿತ್ತಾಪುರ: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಗಳ ಸೇವೆ ಅಮೋಘವಾದದ್ದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸಾದ ಅವಂಟಿ ಹೇಳಿದರು.
ಪಟ್ಟಣದ ಲಾಡ್ಜೀಂಗ್ ಕ್ರಾಸ್ ಹತ್ತಿರ ಸೇವೆ ಸಲ್ಲಿಸುತ್ತಿದ್ದ ಪೊಲೀಸರಿಗೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಊಟದ ಪ್ಯಾಕೇಟ್ ಹಾಗೂ ನೀರಿನ ಬಾಟಲ್ ವಿತರಿಸಿ ಮಾತನಾಡಿದ ಅವರು, ಕಳೆದ ವರ್ಷವೂ ಕೊರೊನಾ ನಿಯಂತ್ರಣ ಮಾಡುವಲ್ಲಿ ಪೊಲೀಸರ ಮತ್ತು ಗೃಹರಕ್ಷಕ ಸಿಬ್ಬಂದಿ ಪಾತ್ರ ಪ್ರಮುಖವಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಕಾಲಕಾಲಕ್ಕೆ ಹೊರಡಿಸುವ ಆದೇಶಗಳ ಪ್ರಕಾರ ತಾಲೂಕು ಆಡಳಿತ ಜೊತೆಗೆ ಪೊಲೀಸರ ಸೇವೆ ಎಷ್ಟು ಮುಖ್ಯವೋ ಅಷ್ಟೇ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.
ಪೊಲೀಸರು ಬೈಕ್ ಹಿಡಿದು ದಂಡ ಹಾಕಿ ಸೀಜ್ ಮಾಡಿದರೂ ಇನ್ನೂ ಜನರು ಅಲ್ಲಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಪೊಲೀಸರು ಹವರ ಜೀವದ ಹಂಗನ್ನು ತೊರೆದು ನಮ್ಮ ಜೀವ ಉಳಿಸಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಸಹ ಅವರಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕೊರೊನಾ ತಡೆಗಟ್ಟಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಮೌನೇಶ ಸುನಾರ್, ಚೇತನ್ ನಾಯಕ, ಗುರು ಹೂಗಾರ, ಅಭಿಷೇಕ್ ರೇಶ್ಮಿ, ನಾಗರಾಜ ರಾವೂರ, ಉಮೇಶ ಸ್ವಾಮಿ, ಬಸವರಾಜಗೌಡ, ಕಾರ್ತಿಕ ಬಂಡಿ, ಸಿದ್ದು ಕಾಶೆಟ್ಟಿ ಇದ್ದರು.

Leave A Reply

Your email address will not be published.