ಆಳಂದ: ಹಿತ್ತಲಶಿರೂರ ಗ್ರಾಮದ ಸಿಆರ್‌ಪಿಎಫ್ ನಿವೃತ್ತ ಇನ್ಸ್ಪೆಕ್ಟರ್ ಕಾಂತಪ್ಪ ಎಂ. ಕಾಮನಕರ್ ಅವರನ್ನು ಗ್ರಾಮಸ್ಥರು, ಬಂಧು-ಬಾAಧವರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಆಳಂದ: ದೇಶದ ಭದ್ರತೆಗೆ ತಮ್ಮ ಬದುಕಿನ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಗೌರವಯುತವಾಗಿ ನಿವೃತ್ತರಾದ ಹಿತ್ತಲಶಿರೂರ ಗ್ರಾಮದ ಕಾಂತಪ್ಪ ಎಂ. ಕಾಮನಕರ್ ಅವರಿಗೆ ಸ್ವಗ್ರಾಮದಲ್ಲಿ ಗ್ರಾಮಸ್ಥರು, ಬಂಧು-ಬಾAಧವರು ಹಾಗೂ ಅಭಿಮಾನಿಗಳು ಆತ್ಮೀಯ ಹಾಗೂ ಭಾವಪೂರ್ಣ ಸ್ವಾಗತ ನೀಡಿ ಅದ್ದೂರಿಯಾಗಿ ಸನ್ಮಾನಿಸಿದರು.
ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕಾಂತಪ್ಪ ಕಾಮನಕರ್ ಅವರು ಸೇವಾ ನಿವೃತ್ತಿ ಬಳಿಕ ಕಲಬುರಗಿಗೆ ಆಗಮಿಸಿ, ನಂತರ ತಮ್ಮ ಸ್ವಗ್ರಾಮ ಹಿತ್ತಲಶಿರೂರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ವಿಶೇಷ ಮೆರವಣಿಗೆಯೊಂದಿಗೆ ಬರಮಾಡಿಕೊಂಡು, ಪುಷ್ಪಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ದೇಶಸೇವೆಗೆ ಸಲ್ಲಿಸಿದ ಅವರ ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆಯನ್ನು ಈ ವೇಳೆ ಎಲ್ಲರೂ ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಇನ್ಸ್ಪೆಕ್ಟರ್ ಕಾಂತಪ್ಪ ಎಂ. ಕಾಮನಕರ್ ಅವರು, ತಮ್ಮ ಸೇವಾ ಜೀವನದ ನೆನಪುಗಳನ್ನು ಹಂಚಿಕೊAಡರು. ಕಠಿಣ ಪರಿಸ್ಥಿತಿಗಳಲ್ಲಿಯೂ ದೇಶದ ಭದ್ರತೆಗಾಗಿ ಕರ್ತವ್ಯ ನಿರ್ವಹಿಸಿದ್ದು ತಮ್ಮ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಾಗಿವೆ. ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಭಕ್ತಿ ಪ್ರತಿಯೊಬ್ಬರ ಜೀವನದ ಮೌಲ್ಯಗಳಾಗಬೇಕು. ಯುವಕರು ದೇಶಸೇವೆ ಹಾಗೂ ಸಮಾಜಸೇವೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಮಗ ದೇಶಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗೌರವಯುತವಾಗಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಕ್ಷಣ ತಂದೆ ಮೌಲಪ್ಪ ಕಾಮನಕರ್ ಹಾಗೂ ತಾಯಿ ಕಮಲಾಬಾಯಿ ಕಾಮನಕರ್ ಅವರಿಗೆ ಭಾವುಕತೆಯ ಕ್ಷಣವಾಗಿತ್ತು. ಮಗನನ್ನು ಆತ್ಮೀಯವಾಗಿ ಬರಮಾಡಿಕೊಂಡು ಆಶೀರ್ವದಿಸಿದ ಪೋಷಕರ ಸಂತಸ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಪಿಯು ಉಪನ್ಯಾಸಕ ಪರಮೇಶ್ವರ ನಿಂಬಾಳ, ಅವಿನಾಶ ಕಡಗಂಚಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜೈಭೀಮ ಮೇಲಿನಕೇರಿ, ಸಂಜಯಕುಮಾರ ಹಿತ್ತಲಶಿರೂರ, ವಿಜಯಕುಮಾರ, ಯುವರಾಜ ಸಿದ್ಧನಾಳ ಸೇರಿದಂತೆ ಅನೇಕ ಗಣ್ಯರು, ಬಂಧು-ಬಾAಧವರು ಹಾಗೂ ಗ್ರಾಮಸ್ಥರು ಬಂಧು-ಬಾAಧವರು ಹಾಗೂ ಅಭಿಮಾನಿಗಳು ಕಾಂತಪ್ಪ ಕಾಮನಕರ್ ಅವರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.