ಆಳಂದ: ಸಮಾಜಿಕ ಸ್ವಾಸ್ಥ್ಯ ಹಾಗೂ ಪರಿವರ್ತನೆಗೆ ಶಿಕ್ಷಕರಿಂದಲೇ ಸಾಧ್ಯ ಎಂದು ಮಾಜಿ ಶಾಸಕ ಸುಭಾಶ ಆರ್. ಗುತ್ತೇದಾರ ಹೇಳಿದರು.
ಶಿಕ್ಷಕಿ ನೀಲಾವತಿ ಪಾಟೀಲರ ಕೃತಿ ಜನಾರ್ಪಣೆ *ಸಾಮಾಜಿಕ ಪರಿವರ್ತನೆಗೆ ಶಿಕ್ಷಕರ ಪಾತ್ರ ಹಿರಿದು: ಗುತ್ತೇದಾರ
ಆಳಂದ: ಭೂಸನೂರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತ ಶಿಕ್ಷಕಿ ನೀಲಾವತಿ ಬಿ. ಪಾಟೀಲ ಅವರ ‘ಹೃದಯಾಂತರಾಳದ ಮಾತುಗಳು’ ಕೃತಿಯನ್ನು ಶ್ರೀ ವೀರ ಮಹಾಂತೇಶ್ವರ ಶಿವಾಚಾರ್ಯರು ಜನಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ತಾಲ್ಲೂಕಿನ ಭೂಸನೂರ ಗ್ರಾಮದಲ್ಲಿ ಏರ್ಪಡಿಸಿದ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ನೀಲಾವತಿ ಬಿ ಪಾಟೀಲ ಅವರ ಅಭಿನಂದನಾ ಸಮಾರಂಭ ಹಾಗೂ ಹೃದಯಾಂತರಾಳದ ಮಾತುಗಳು ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾರು ಸಮಾಜದ ಕಳಕಳಿ ಹೊಂದಿರುತ್ತಾರೆಯೋ ಅವರಿಂದ ಮಾತ್ರ ಪ್ರಗತಿ ಕಾಣಬಹುದು. ಈ ದಿಸೆಯಲ್ಲಿ ನೀಲಾವತಿ ಪಾಟೀಲ ಅವರ ಶಿಕ್ಷಕ ವೃತ್ತಿ ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳು ಎಲ್ಲರಿಗೂ ಮಾದರಿಯಾಗಿವೆ. ಕಳೆದ ಮೂರು ದಶಕಗಳ ಕಾಲ ಸಾಮಾಜಿಕ, ಧಾರ್ಮಿಕ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ತಮ್ಮದೇಯಾದ ವಿಶಿಷ್ಠ ಸೇವೆ ಕೊಟ್ಟಿದ್ದಾರೆ. ಆದರ್ಶ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಹಾಗೂ ದಾಸೋಹ ಕೈಂಕರ್ಯಗಳು ಅವರನ್ನು ಆದರ್ಶ ಶಿಕ್ಷಕಿಯನ್ನಾಗಿ ರೂಪಿಸಿದವು ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಹೃದಯಾಂತರಾಳದ ಮಾತುಗಳು ಕೃತಿಯನ್ನು ಚೌಡಾಪೂರದ ಶ್ರೀ ವೀರ ಮಹಾಂತೇಶ್ವರ ಶಿವಾಚಾರ್ಯರು ಜನಾರ್ಪಣೆಗೊಳಿಸಿ, ಬಹುಮುಖ ವ್ಯಕ್ತಿತ್ವದ ನೀಲಾವತಿ ಪಾಟೀಲ ಅವರ ಶಿಕ್ಷಕ ವೃತಿ ಜೀವನ ತುಂಬಾ ಅಪರೂಪವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶೀ ಶ್ರೀಕಂಠ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯರು, ಸಾಹಿತಿ ಧರ್ಮಣ್ಣ ಎಚ್ ಧನ್ನಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಕರ್ನಾಟಕ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿರಿಯರ ಸಂಘಧ್ಯಕ್ಷೆ ಶೈಲಜಾ ಪೋಮಾಜಿ, ಮುಖಂಡರಾದ ಬಾಬುರಾವ ಪಾಟೀಲ, ರಾಜಶೇಖರ ಪಾಟೀಲ, ನರಸಪ್ಪ ಬಿರಾದಾರ, ರೇವಣಸಿದ್ದಪ್ಪ ಪಟ್ನೆ, ರಾಜಶೇಖರ ಯಂಕAಚಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಭಾಗವಹಿಸಿದರು. ನಂತರ ಶಿಕ್ಷಕಿ ನೀಲಾವತಿ ಬಿ ಪಾಟೀಲ ಅವರಿಗೆ ಶಿಕ್ಷಣ ಇಲಾಖೆ ಹಾಗೂ ಭೂಸನೂರ ಗ್ರಾಮಸ್ಥರಿಂದ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.