Shubhashaya News

ಮದ್ಯದಂಗಡಿ ಮುಂದೆ ಪುಲ್ ಕ್ಯೂ.!

ರಾಜ್ಯದಲ್ಲಿ ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳವರೆಗೆ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕೊರೋನಾ ನಿಯಂತ್ರಣಕ್ಕಾಗಿ ಈ ಕಠಿಣ ರೂಲ್ಸ್ ಜಾರಿಗೆ ತರಲಾಗಿದೆ. ಇದೊಂತರ ಲಾಕ್ ಡೌನ್ ತರವೇ ಆಗಿದ್ದರೂ, ಲಾಕ್ ಡೌನ್ ಪದ ಬಳಸೋದಿಲ್ಲ. ನೀವು ಹೇಗ್ ಬೇಕೋ ಹಾಕೆ ಹಾಕಿಕೊಳ್ಳಿ ಅಂತ ಸ್ವತಹ ಸಿಎಂ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಹೀಗಾಗಿ ಲಾಕ್ ಡೌನ್ ಘೋಷಣೆಯಾದ ಕಾರಣ, ರಾಜ್ಯಾಧ್ಯಂತ ನಾಳೆಯಿಂದ ಎಣ್ಣೆ ಅಂಗಡಿ ಓಪನ್ ಆಗುತ್ತೋ ಇಲ್ಲವೋ ಅಂತ, ಮದ್ಯದಂಗಡಿ ಮುಂದೆ ಎಣ್ಣೆ ಖರೀದಿಗಾಗಿ ಮುಗಿ ಬಿದ್ದಿದ್ದಾರೆ.

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ನಂತ್ರ, ನಾಳೆಯಿಂದ 14 ದಿನ ಕಠಿಣ ರೂಲ್ಸ್ ಜಾರಿಗೊಳಿಸಲಾಗಿದೆ. ಒಂದರ್ಥದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಲಾಕ್ ಡೌನ್ ಸಂದರ್ಭದಲ್ಲಿಯೂ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ಮಾಡಿಕೊಡಲಾಗಿದೆ. ಇದರ ಮಧ್ಯೆಯೂ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರುವಂತ ಸಿಎಂ ಯಡಿಯೂರಪ್ಪ, ಮದ್ಯದಂಗಡಿ ಓಪನ್ ಇರುತ್ತದೆ. ಅಲ್ಲೇ ಕುಡಿಯೋ ಹಾಗೆ ಇಲ್ಲ, ಪಾರ್ಸಲ್ ತಗೊಂಡು ಹೋಗೋದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಆದ್ರೂ.. ನಾಳೆ ರಾತ್ರಿ 9 ಗಂಟೆಯಿಂದ 14 ದಿನ ಸಂಪೂರ್ಣ ಲಾಕ್ ಡೌನ್ ಅನ್ನು ರಾಜ್ಯಾಧ್ಯಂತ ಘೋಷಿಸಿರೋ ಹಿನ್ನಲೆಯಲ್ಲಿ, ಮದ್ಯ ಸಿಗುತ್ತೋ ಇಲ್ಲವೋ ನಾಳೆ ಅಂತ. ಈಗಲೇ ಮದ್ಯ ಖರೀದಿಗಾಗಿ ಎಣ್ಣೆ ಪ್ರಿಯರು ಮದ್ಯದಂಗಡಿ ಮುಂದೆ ಮುಗಿ ಬಿದ್ದಿದ್ದಾರೆ. ಮದ್ಯ ಖರೀದಿಗಾಗಿ ಮದ್ಯದಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿರೋದು ರಾಜ್ಯಾಧ್ಯಂತ ಕಂಡು ಬರುತ್ತಿದೆ.

Leave A Reply

Your email address will not be published.