Shubhashaya News

ಕೊರಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆ ಗೋಳು

ಆಳಂದ: ವಸತಿ ಶಾಲೆಯ ಮೂತ್ರಾಲಯಕ್ಕೆ ಸೂಕ್ತ ನೀರಿಲ್ಲದೆ ಮೂತ್ರ ಹರಿದು ವಾಸನೆ ದೃಶ್ಯ ಕ್ಯಾಮಿರಾಕ್ಕೆ ಸೇರೆಯಾಗಿದೆ.

ಆಳಂದ: ಕೊರಳ್ಳಿ ರಸ್ತೆ ಮಾರ್ಗದಲ್ಲಿನ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೌಚಾಲಯದೊಳಗೆ ಶೌಚಕ್ಕೆ ತೆರಳಿದ ವಿದ್ಯಾರ್ಥಿಗೆ ನಲ್ಲಿ ತಿರುವಿದರು ನೀರೇ ಬರಲಿಲ್ಲ.


ಆಳಂದ: ಶೌಚಾಲಯವೊಂದಲ್ಲಿ ಕಲ್ಲು ಪರ್ಷಿಕಲ್ಲು ಬಿದ್ದು ಹದಗೆಟ್ಟು ದುಸ್ಥಿತಿ ನೋಟ.


ಆಳಂದ: ಕೋರಳಿ ಮಾರ್ಗದ ನೆಹರುನಗರ ತಾಂಡಾ ಬಳಿಯಿರುವ ಮೊರಾರ್ಜಿ ದೇಸಾಯಿ ಐದನೂರು ವಿದ್ಯಾರ್ಥಿಗಳಿರುವ ಶಾಲೆಯ ಕಟ್ಟಡಕ್ಕೆ ಆವರಣಗೋಡೆಯಿಲ್ಲ.

ಅಳಂದ: ತಾಲೂಕಿನ ಕೊರಳ್ಳಿ ಗ್ರಾಮದ ರಸ್ತೆ ಮಾರ್ಗದಲ್ಲಿ ಸಮೀಪದ ನೆಹರುನಗರ ತಾಂಡಾ ಬಳಿ ಸ್ಥಾಪಿಸಲಾಗಿರುವ ಅಲ್ಪಸಂಖ್ಯಾತರ ಇಲಾಖೆಯ ಒಳಪಡುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂಲಸೌಲಭ್ಯಗಳಿಲ್ಲದೆ ಪ್ರವೇಶ ಪಡೆದ ನಮಗೆ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ಅಳಂದ ಬಸ್ ನಿಲ್ದಾಣದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಯನೀಯ ಸ್ಥಿತಿಯು ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಯಲಿಗೆಳೆದಿದೆ.
500 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಅವರ ಶಿಕ್ಷಣ, ಆರೋಗ್ಯ, ಮತ್ತು ಭದ್ರತೆಯು ತೀವ್ರ ಸಮಸ್ಯೆಯನ್ನು ಎದುರಿಸಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ವಿಶ್ವಾಸನಿಯ ಮೂಲಗಳಿಗೆ ಹೇಳಿಕೊಂಡಿದ್ದಾರೆ.
ಕುಡಿಯುವ ನೀರಿನ ಕೊರತೆ: ಶಾಲೆಯ ಎರಡು ಕೊಳವೆ ಬಾವಿಗಳು ವಿಫಲವಾಗಿದ್ದು, ಸ್ಥಳೀಯ ರೈತನ ಕೃಷಿ ಭೂಮಿಯಿಂದ ಹಣ ಪಾವತಿಸಿ ನೀರು ತರಲಾಗುತ್ತಿದೆ. ಆದರೆ, 500 ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸ್ನಾನ, ಶೌಚಾಲಯ, ಮತ್ತು ಬಟ್ಟೆ ಒಗೆಯಲು ಸಾಕಷ್ಟು ನೀರು ಲಭ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳ ದೈನಂದಿನ ಜೀವನ ಕಷ್ಟಕರವಾಗಿದೆ.
ಅಸ್ವಚ್ಛ ಶೌಚಾಲಯಗಳು:
ಬಾಲಕ-ಬಾಲಕಿಯರ ವಸತಿಗೃಹಗಳ ಶೌಚಾಲಯಗಳು ನೀರಿನ ಕೊರತೆಯಿಂದ 8 ರಿಂದ 15 ದಿನಗಳಿಗೊಮ್ಮೆ ಮಾತ್ರ ಸ್ವಚ್ಛಗೊಳ್ಳುತ್ತಿವೆ, ಇದರಿಂದ ದುರ್ವಾಸನೆ ಮತ್ತು ಅಸ್ವಚ್ಛತೆಯಿಂದ ಕೂಡಿವೆ. ಕೆಲವು ಶೌಚಾಲಯಗಳ ಬಾಗಿಲುಗಳು ಒಡದಿರುವುದರಿಂದ ಬಾಲಕಿಯರಿಗೆ ಗೌಪ್ಯತೆಯ ಕೊರತೆ ಎದುರಾಗಿದೆ.
ವಿದ್ಯುತ್ ಬ್ಯಾಕಪ್ ಇಲ್ಲ:
ರಾತ್ರಿಯ ವೇಳೆ ವಿದ್ಯುತ್ ಬ್ಯಾಕಪ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಭಯದಲ್ಲಿ ಕಾಲಕಳೆಯುವಂತಾಗಿದೆ. ಈ ಕುರಿತು ಸ್ಥಳೀಯ ಸಿಬ್ಬಂದಿಯೊಬ್ಬರು ಹೇಳುವಂತೆ ಇನ್ವರ್ಟರ್‍ಗಳನ್ನು ರಿಪೇರಿಗೆ ಕಳುಹಿಸಲಾಗಿದೆ ವಿದ್ಯುತ್ ಸಂಪರ್ಕ ಕಡಿತವಾದರೆ ವಸತಿ ನಿಲಯದಲ್ಲಿ ಬೆಳಕಿನ ಸಮಸ್ಯೆ ಇದೆ ಹೇಳಿಕೊಂಡಿದ್ದಾರೆ. ಆದರೆ ಗಂಟೆ ಗಂಟ ಲೆವಿದ್ಯುತ್ ಕೈಕೊಟ್ಟರೆ ಮಕ್ಕಳ ಓದಿಗೆ ಹಿನ್ನೆಡೆಯಾಗುತ್ತಿದೆ. ಅಲ್ಲದೆ, ವಿಶೇಷವಾಗಿ ಬಾಲಕಿಯರಿಗೆ ಭದ್ರತಾ ಸಮಸ್ಯೆಗಳನ್ನು ಉಂಟುಮಾಡಿದೆ ಎನ್ನಲಾಗಿದೆ.
ಮುಕ್ತ ಶೌಚದ ಸಮಸ್ಯೆ: ನೀರಿನ ಕೊರತೆ ಮತ್ತು ಅಸ್ವಚ್ಛ ಶೌಚಾಲಯಗಳಿಂದಾಗಿ, ರಾತ್ರಿಯ ವೇಳೆ ವಿದ್ಯಾರ್ಥಿಗಳು, ಮುಖ್ಯವಾಗಿ ಬಾಲಕಿಯರು, ಶಾಲಾ ಆವರಣದ ಹೊರಗೆ ಬಹಿರ್ದೇಸೆ ಶೌಚಕ್ಕೆ ತೆರಳಬೇಕಾದ ಶೋಚನೀಯ ಪರಿಸ್ಥಿತಿ ಎದುರಾಗಿದೆ.
ಸುರಕ್ಷತೆಯ ಕೊರತೆ:
ಶಾಲೆಯ ಸುತ್ತಲೂ ಗೋಡೆ ಇಲ್ಲದಿರುವುದರಿಂದ 500 ವಿದ್ಯಾರ್ಥಿಗಳ ಭದ್ರತೆಗೆ ಧಕ್ಕೆಯಾಗಿದೆ. ಬಾಲಕಿಯರಿಗೆ ಮಹಿಳಾ ವಾರ್ಡನ್ ಅಥವಾ ಭದ್ರತಾ ಸಿಬ್ಬಂದಿ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಕೇವಲ ಒಬ್ಬ ಮಹಿಳಾ ದಾದಿಯμÉ್ಟೀ ಇದ್ದಾರೆ, ಇದು ಸಾಕಷ್ಟಿಲ್ಲ ಮಕ್ಕಳು ಹೇಳಿಕೊಂಡಿದ್ದಾರೆ.
ರಸ್ತೆ ಸಂಪರ್ಕದ ಕೊರತೆ:
ಕೊರಳ್ಳಿ ಮಾರ್ಗದ ರಸ್ತೆಯಿಂದ ಶಾಲೆಗೆ ಸಂಪೂರ್ಣ ರಸ್ತೆ ಸಂಪರ್ಕವಿಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಪರದಾಡುವಂತಾಗಿದೆ.
ಕಳಪೆ ಆಹಾರದ ಗುಣಮಟ್ಟ: ವಿದ್ಯಾರ್ಥಿಗಳು ಶಾಲೆಯಲ್ಲಿ ಒದಗಿಸುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ್ದಾರೆ, ಇದರಿಂದ ಅವರ ಪೌಷ್ಟಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀಳುತ್ತಿದೆ ಎಂಬುದು ಕೇಳಿಬಂದಿದೆ.
ಕ್ರಮಕ್ಕೆ ಒತ್ತಾಯ:
ಈ ಶಾಲೆಯ 500 ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಅಲ್ಪಸಂಖ್ಯಾರ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಶೌಚಾಲಯಗಳು, ವಿದ್ಯುತ್ ಬ್ಯಾಕಪ್, ಗೋಡೆ ನಿರ್ಮಾಣ, ಮಹಿಳಾ ವಾರ್ಡನ್ ಮತ್ತು ಭದ್ರತಾ ಸಿಬ್ಬಂದಿಯ ನೇಮಕ, ರಸ್ತೆ ಸಂಪರ್ಕ, ಮತ್ತು ಗುಣಮಟ್ಟದ ಆಹಾರವನ್ನು ಒದಗಿಸುವುದು ಅಗತ್ಯವಾಗಿದೆ.
ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಮತ್ತು ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗಳನ್ನು ತಕ್ಷಣ ಬಗೆಹರಿಸದಿದ್ದರೆ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಜೀವನದ ಮೇಲೆ ದೀರ್ಘಕಾಲೀನ ಋಣಾತ್ಮಕ ಪರಿಣಾಮ ಬೀಳಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪಾಲಕರು ಮಕ್ಕಳು ಸೇರಿ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿಕೊಂಡಿದ್ದಾರೆ.
ಶಾಲಾ ಪ್ರಾಚಾರ್ಯರ ಸ್ಪಷ್ಟನೆ: ಶಾಲೆಗೆ ನೀರಿನ ವ್ಯವಸ್ಥೆ ಪರಿಹರಿಸಲಾಗುತ್ತಿದೆ. ಖಾಸಗಿ ವ್ಯಕ್ತಿಗಳ ಬಳಿ ನೀರು ಪಡೆಯಲಾಗುತ್ತಿದೆ. ಇನವೆಟರ್ ಕೆಟ್ಟಿದ್ದರಿಂದ ಸಮಸ್ಯೆಯಾಗಿತು, ದುರಸ್ಥಿಕೈಗೊಳ್ಳಲಾಗಿದೆ. ಸದ್ಯ ಶಾಲೆ ಹೆಚ್ಚುವರಿ ಕಟ್ಟಡ ನಡೆಯುತಿದೆ, ಈ ಕಟ್ಟಡ ನಿರ್ಮಾಣದಲ್ಲಿ ಹೊಸ ಕೊಳ್ಳವೆ ಬಾವಿ ಕೊರುಸಿಕೊಟ್ಟರೆ ನೀರಿನ ಸಮಸ್ಯೆ ನೀಗುತ್ತದೆ. ಆವರಣ ಗೋಡೆ ಮಂಜುರಾಗಿದೆ. ಕಟ್ಟಡ ತಿಂಗಳಲ್ಲಿ ಆರಂಭಗೊಳ್ಳಲಿದೆ. ಮೇನು ಪ್ರಕಾರ ಊಟ ಕೊಡಲಾಗುತ್ತಿದೆ. 500ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ವರ್ಷ ಮಕ್ಕಳ 150 ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಯಾವುದೇ ಸಮಸ್ಯೆಗಳೆನಿಲ್ಲ.
ಚಂದ್ರಪ್ಪಾ ಪ್ರಾಚಾರ್ಯರು
ಮೊರಾರ್ಜಿ ದೇಸಾಯಿ ವಸತಿ ಶಾಲೆ ನೆಹರು ನಗರ ತಾಂಡಾ. ಆಳಂದ.

Comments are closed.

Don`t copy text!