ಆಳಂದ: ಯಳಸಂಗಿ ಸರ್ಕಾರಿ ಶಾಲೆಯ ಇಕೋಕ್ಲಬ್ ಅಡಿ ಪರಿಸರ ಜಾಗೃತಿ ಅಂಗವಾಗಿ ಸಸಿನೆಟ್ಟು ನೀರುಣಿಸಿ ಮಕ್ಕಳಲ್ಲಿ ಪರಿಸರ ಅರಿವು ಮೂಡಿಸಲಾಯಿತು.
ಆಳಂದ: ಪರಿಸರ ನಮ್ಮ ಜೀವನದ ಅನಿವಾರ್ಯ ಅಂಶವಾಗಿದೆ, ಗಾಳಿ ಮತ್ತು ನೀರು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ನಾವು ಪರಿಸರದಿಂದ ಪಡೆಯುತ್ತೇವೆ. ಹೀಗಾಗಿ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪೆÇಲೀಸ್ ಅಧಿಕಾರಿ ಬಸವರಾಜ್ ಜಂದೆ ಅವರು ಹೇಳಿದರು.
ತಾಲೂಕಿನ ಯಳಸಂಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಕೋ ಕ್ಲಬ್ 2024-25ರ ಯೋಜನೆಯ ಅಡಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನವನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
“ನಾವು ಸೇವಿಸುವ ಗಾಳಿ ಪರಿಸರದಿಂದಲೇ ದೊರಕುತ್ತದೆ. ಉತ್ತಮ ಪರಿಸರವು ಉತ್ತಮ ಗುಣಮಟ್ಟದ ಗಾಳಿಯನ್ನು ಒದಗಿಸುತ್ತದೆ. ಹೀಗಾಗಿ, ಪರಿಸರವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳು ಚೆನ್ನಾಗಿ ಓದುತ್ತ, ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯಗುರು ದತ್ತಪ್ಪಾ ಸುಳ್ಳನ್ ಅವರು, “ದೇಶ ಅಭಿವೃದ್ಧಿಯಾಗಲು ಪರಿಸರದ ಸಂರಕ್ಷಣೆ ಅತ್ಯವಶ್ಯಕ. ವರದಿಯ ಪ್ರಕಾರ, ದೇಶದಲ್ಲಿ ಶೇ.23ರಷ್ಟು ಅರಣ್ಯ ಕವಚ ಉಳಿಯಬೇಕಾಗಿದೆ. ಅಂದಾಗ ಮಾತ್ರ ದೇಶ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ,” ಎಂದು ವಿವರಿಸಿದರು.
ಗಿಡ ನೆಟ್ಟು ಜಾಗೃತಿ: ಕಾರ್ಯಕ್ರಮದ ಅಂತ್ಯದಲ್ಲಿ ಅತಿಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ಗಿಡಗಳನ್ನು ನೆಡುವ ಮೂಲಕ ಪರಿಸರದ ಮಹತ್ವವನ್ನು ಪ್ರಾಮುಖ್ಯತೆಯೊಂದಿಗೆ ಹಂಚಿಕೊಂಡರು. ಈ ಮೂಲಕ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ವನಭೋಜನದ ಮೂಲಕ ಪರಿಸರ ಅರಿವು: ಜಾಗೃತಿ ಅಭಿಯಾನದ ಕೊನೆ ಭಾಗದಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗ್ರಾಮ ಹೊರವಲಯದಲ್ಲಿರುವ ‘ಸಿದ್ಧಗಿರಿ’ ಪ್ರದೇಶಕ್ಕೆ ತೆರಳಿ, ವನಾಭೋಜನ ಸವಿಯುವ ಮೂಲಕ ಪರಿಸರ ಸಂರಕ್ಷಣೆಯ ಅಗತ್ಯತೆಯನ್ನು ಪುನರುಚ್ಛರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹಾರೂನ್ ಪಟೇಲ್, ಮಹಿಬೂಬ್ ನದಾಫ್, ಸಿದ್ದಾರೂಢ ಐರೋಡಗಿ, ಅಶ್ವಿನಿ ಮ್ಯಾಕೆರಿ, ಶೋಭಾ ಬುಳ್ಳಾ, ಯಲ್ಲವ್ವ ಢಾಕನ್, ರೇμÁ್ಮ ಯಲ್ದೆ, ಕವಿತಾ ಬುಳ್ಳಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಾವೇದ್ ಪಟೇಲ್ ನಿರೂಪಿಸಿದರು, ರವಿಕಾಂತ್ ಹೊನಗುಂಡಿ ವಂದಿಸಿದರು.