ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಶ್ರೀಮಠದಲ್ಲಿ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳ 40ನೇ ಗುರುವಂದನಾ ಮಹೋತ್ಸವವು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಈ ವೇಳೆ ಶಿವಯೋಗಿ ಜ್ಞಾನ ಮಂದಿರದ ಬಡ ಮಕ್ಕಳೊಂದಿಗೆ ಶ್ರೀಗಳ ಆದರ್ಶಗಳನ್ನು ಸ್ಮರಿಸಲಾಗಿದ್ದು, ಮಹೋತ್ಸವವು ವಿಶೇಷವಾಗಿ ಗಮನಸೆಳೆದಿತು.
ಮಹೋತ್ಸವದ ಆರಂಭದಲ್ಲಿ ಶ್ರೀಮಠದ ಪರಂಪರೆಯನ್ನು ಸ್ಮರಿಸುವ ಮೂಲಕ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಶಿಕ್ಷಣ” ಎಂಬ ಸಂಕಲ್ಪವನ್ನು ಪುನರುಚ್ಚರಿಸಲಾಯಿತು. ಮೊದಲು ಮುಗಳಖೋಡ ಶ್ರೀಮಠದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಶ್ರೀಗಳು, ಈ ಬಾರಿಯ ನವ ಕಲ್ಯಾಣ ಜಿಡಗಾ ಶ್ರೀಮಠದಲ್ಲಿ ಬಡ ಮಕ್ಕಳ ಸಂತೋಷಕ್ಕಾಗಿ ಗುರುವಂದನಾ ಮಹೋತ್ಸವವನ್ನು ಹಮ್ಮಿಕೊಂಡ ಭಕ್ತಾದಿಗಳು ವಿಶೇಷ ನಮನ ಅರ್ಪಿಸಿದರು.
ಈ ಸಮಾರಂಭದಲ್ಲಿ ಮಾದನ ಹಿಪ್ಪರಗಾದ ಮಠದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಚಿನ್ಮಮಯಗಿರಿ ಮಠದ ಶ್ರೀ ವೀರಮಹಾಂತ ಶಿವಾಚಾರ್ಯ ಪಾಲ್ಗೊಂಡು ಮಾತನಾಡಿ, ಜಿಡಗಾ ಶ್ರೀಗಳ ಸಮಾಜೋ ಧಾರ್ಮಿಕ ಕಾರ್ಯಕಗಳ ಜನಕಲ್ಯಾಣ ಹಿತಕಾಯುವಂತಾಗಿವೆ. ಭಕ್ತರು “ಗುರುವಿನ ಸೇವೆ ಹಾಗೂ ಭಕ್ತರ ಕಾಯಕದಲ್ಲಿ ನಂಬಿಕೆ” ಮುನ್ನೆಡೆಸಿ ಜೀವನ ಹಸನಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ಕಲಬುರಗಿ-ಯಾದಗಿರಿ-ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ಅವರನ್ನು ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸನ್ಮಾನಿಸಿದರು. ಅವರು ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಶ್ರಮಿಸುವಂತೆ ಆಶೀರ್ವಚನ ನೀಡಿದರು.
2025ರ ಶ್ರೀಮಠ ಕ್ಯಾಲೆಂಡರ್ ಬಿಡುಗಡೆ:
ವೇದಮೂರ್ತಿ ಚನ್ನವೀರಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ 2025ರ ಶ್ರೀಮಠ ಕ್ಯಾಲೆಂಡರ್ ಅನ್ನು ಶ್ರೀಗಳು ಲೋಕಾರ್ಪಣೆ ಕೈಗೊಂಡರು. ಈ ವೇಳೆ ವೀರಶೈವ ಮಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ್ ಕೋರಳ್ಳಿ, ಆನಂದರಾವ್ ಪಾಟೀಲ್, ಸಂತೋμï ಹಾದಿಮನಿ, ರಾಜಶೇಖರ ಯಂಕಂಚಿ, ಮಲ್ಲಪ್ಪ ಹತ್ತರ್ಕಿ, ಮತ್ತು ಸತೀಶ್ ಪಡಶಟ್ಟಿ, ಡಿವೈಎಸ್ಪಿ ಗೋಪಿ ಬಿ.ಆರ್. ಮತ್ತಿತರು ಭಾಗವಹಿಸಿದರು.
ಸಂಗೀತ ಕಲಾಬಳಗದ ಭಕ್ತಿ ಸಂಗೀತ, ಸಿದ್ದಶ್ರೀ ಶಾಲಾ ಮಕ್ಕಳ ನೃತ್ಯ ಪ್ರಾತ್ಯಕ್ಷಿಕೆ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಸಭೆಯನ್ನು ದೀವಟಿಗೆಯಂತೆಯೇ ಬೆಳಗಿಸಿತು. ಈ ಸಂದರ್ಭದಲ್ಲಿ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಮಹೋತ್ಸವದ ಯಶಸ್ಸಿಗೆ ಸಾಕ್ಷಿಯಾದರು.
ಮಹೋತ್ಸವವು ಸಂತೋಷಭರಿತವಾಗಿ ಮುಕ್ತಾಯಗೊಳ್ಳುವ ಮೂಲಕ ಗುರುಭಕ್ತಿ ಮತ್ತು ಸಮಾಜಸೇವೆಯ ಮೌಲ್ಯಗಳನ್ನು ಉಜ್ಜೀವಿತಗೊಳಿಸಿತು.