Shubhashaya News

ಏಪ್ರಿಲ್ 5 ರಂದು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ 5ನೇ ತಂಡದ ಸ್ಪೇಷಲ್ ಆರ್.ಎಸ್.ಐ./ ಆರ್.ಎಸ್.ಐ., 3ನೇ ತಂಡದ ಪಿ.ಎಸ್.ಐ. (ಗುಪ್ತವಾರ್ತೆ) ಹಾಗೂ 5ನೇ ತಂಡದ ಪಿ.ಎಸ್.ಐ. (ನಿಸ್ತಂತು) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನವು ಸೋಮವಾರ ಏಪ್ರಿಲ್ 5 ರಂದು ಬೆಳಿಗ್ಗೆ 7.30 ಗಂಟೆಗೆ ಕಲಬುರಗಿ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ (ಪಿ.ಟಿ.ಸಿ.) ಕವಾಯತು ಮೈದಾನದಲ್ಲಿ ಜರುಗಲಿದೆ.
ಬೆಂಗಳೂರಿನ (ರಾಜ್ಯ ಗುಪ್ತವಾರ್ತೆ) ಹೆಚ್ಚು ಪೊಲೀಸ್ ಮಹಾನಿರ್ದೇಶಕ ಬಿ. ದಯಾನಂದ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪಥಸಂಚಲನ ಪರಿವೀಕ್ಷಣೆ ಮಾಡಿ ಬಹುಮಾನ ವಿತರಿಸುವರು. ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮನೀಷ ಖರ್ಬಿಕರ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಕಲಬುರಗಿ ನಗರ (ಕಾ.ಸು.) ಉಪ ಪೊಲೀಸ್ ಆಯುಕ್ತ ಡಿ. ಕಿಶೋರ ಬಾಬು ಹಾಗೂ ಕಲಬುರಗಿ ಪೊಲೀಸ್ ಅಧೀಕ್ಷಕರಾದ ಡಾ. ಸಿಮಿ ಮರಿಯಂ ಜಾರ್ಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Leave A Reply

Your email address will not be published.