Shubhashaya News

ಕ್ವಾರಂಟೈನ್‍ಗಾಗಿ ಪಾಲಿ ಭಾಷಾ ಸಂಸ್ಥೆಯ ಹಾಸ್ಟೆಲ್ ಕಟ್ಟಡ ಅಧಿಗ್ರಹಣ

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋರೋನಾ ಶಂಕಿತ ವ್ಯಕ್ತಿಗಳ ಕ್ವಾರಂಟೈನ್ ಕೇಂದ್ರಕ್ಕಾಗಿ ಕಲಬುರಗಿ ನಗರದ ಬುದ್ಧ ವಿಹಾರ ಹತ್ತಿರದ ಪಾಲಿ ಭಾಷಾ ಸಂಸ್ಥೆಯ ಹಾಸ್ಟೇಲ್ ಕಟ್ಟಡವನ್ನು ಜಿಲ್ಲಾಡತವು ಅಧಿಗ್ರಹಣ ಮಾಡಿಕೊಂಡಿದೆ. ಈ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಈ ಹಾಸ್ಟೇಲ್ ಕಟ್ಟಡವನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಸ್ತಾಂತರಿಸಬೇಕೆಂದು ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.
ಸಾಂಕ್ರಾಮಿಕ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ Disaster Management Act 2005 2005, ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಬುರಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

Comments are closed.

Don`t copy text!