Shubhashaya News

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ 110/33/11 ಕೆವಿ ಕಲಬುರಗಿ (ಉತ್ತರ), 110/11ಕೆವಿ ಕಲಬುರಗಿ (ಪಶ್ಚಿಮ), 110/11ಕೆವಿ ಕಪನೂರ ಹಾಗೂ 33/11 ಕೆವಿ ಜಂಬಾಗಾ(ಬಿ) ಉಪ-ವಿತರಣಾ ಕೇಂದ್ರದಲ್ಲಿ ಲೈನ್ ಕ್ಲಿಯರ್ ಕೆಲಸ ಕೈಗೊಂಡಿರುವ ಪ್ರಯುಕ್ತ ಇದೇ ಏಪ್ರಿಲ್ 4 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಉಪ-ವಿತರಣಾ ಕೇಂದ್ರದ ಮೇಲೆ ಬರುವ ಜಂಬಗಾ ಮತ್ತು ಮಾಡಿಯಾಳ ಫೀಡರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
110/33/11ಕೆ.ವಿ. ಉತ್ತರ, ಪಶ್ಚಿಮ, ಕಪನೂರ ಮತ್ತು ಜಂಬಗಾ(ಬಿ) ವಿದ್ಯುತ್ ವಿತರಣಾ ಕೇಂದ್ರ: 11ಕೆವಿ ಫೀಡರ್ ಪಟ್ಟಣ (ಎನ್.ಝಡ್.ವಾಯ್) ಮತ್ತು ಜಫರಾಬಾದ್ (ಐಪಿ ಸೆಟ್), ಕೆರಿಬೊಸಗಾ, ಭೀಮಳ್ಳಿ, ಪಟ್ಟಣ, ಹತಗುಂದಾ, ಯಳವಂತಗಿ, ಸವಳಗಿ(ಬಿ), ಸವಳಗಿ ಸ್ಟೇಷನ್ ಬೇಲೂರ್ ಇಂಡಸ್ಟ್ರಿಯಲ್ ಮತ್ತು ಬನ್ನೂರ(ಎನ್.ಜೆ.ವಾಯ್) ಮತ್ತು 33/11 ಕೆವಿ ಜಂಬಾಗಾ(ಬಿ).

Comments are closed.

Don`t copy text!