ದರ್ಶನ್ ಗ್ಯಾಂಗ್ ವಿರುದ್ದ ರೌಡಿಶೀಟ್ ತೆರೆಯಲ ಪೋಲಿಸ್ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದಿನ ಪ್ರಕರಣ ಹಾಗೂ ದೂರುಗಳನ್ನು ಕೂಡ ಪೋಲೀಸರು ದರ್ಶನ್ ಅಂಡ್ ಗ್ಯಾಂಗ್ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಮುಂದೆ ಸಮಾಜಕ್ಕೆ ತೊಂದರೆ ಮಾಡದಂತೆ ನಿಗಾ ಇಡುವ ನಿಟ್ಟಿನಲ್ಲಿ ಆರೋಪಿಗಳ ವಿರುದ್ದ ರೌಡಿಶೀಟ್ ಅನ್ನು ತೆರೆದರು ಕೂಡ ಅನುಮಾನವಿಲ್ಲ ಎನ್ನುತ್ತಿವೆ ಪೋಲಿಸ್ ಮೂಲಗಳು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಿರುವ, ಸಾರ್ವಜನಿಕ ಸ್ಥಳಗಳಲ್ಲಿ ಜೂಜು ಮಟಕಾ ಇತರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರಿಗೆ ಮುಲಾಜಿಲ್ಲದೇ ಪೊಲೀಸ್ ಇಲಾಖೆ ರೌಡಿ ಶೀಟ್ ತೆಗೆಯಲು ಮುಂದಾಗುತ್ತದೆ.
Comments are closed.