ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀದರ್ ಲೋಕಸಭಾ ಬಿಜೆಪಿ ಭಗವಂತ ಖೂಬಾ ಪರ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಮತಯಾಚನೆ ಮಾಡಿದರು. ಆನಂದರಾವ ಪಾಟೀಲ ಸೇರಿದಂತೆ ಇತರರು ಇದ್ದರು.
ಭಾರತವನ್ನು ಜಾಗತಿಕವಾಗಿ ಗುರುತಿಸುವಲ್ಲಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಮಂತ್ರಿ ಮಾಡುವಲ್ಲಿ ಹಾಗೂ ದೇಶದ ಸುರಕ್ಷತೆಗಾಗಿ ಕ್ಷೇತ್ರದ ಜನತೆ ಬಿಜೆಪಿ ಬೆಂಬಲಿಸಬೇಕೆಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಅಂಗವಾಗಿ ಮತಕ್ಷೇತ್ರದ ವಿವಿಧ ಗ್ರಾಮಗಳಾದ ಸುಂಟನೂರ, ನಿಂಬರ್ಗಾ, ಹಿತ್ತಲಶಿರೂರ, ಮಾಡಿಯಾಳ, ಯಳಸಂಗಿ, ಹಡಲಗಿ, ನಿಂಬಾಳ, ಮಾದನಹಿಪ್ಪರ್ಗಾ, ದರ್ಗಾಶಿರೂರ, ಮೋಘಾ (ಬಿ), ಜಿಡಗಾ, ಕವಲಗಾ ಮತಯಾಚನೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಕೃತ್ಯಗಳು, ದೇಶದ್ರೋಹಿ ಘಟನೆಗಳು ನಡೆಯುತ್ತಿವೆ. ಬೆಂಗಳೂರು ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ. ಪೆÇೀಷಕರು ಹೆಣ್ಣು ಮಕ್ಕಳನ್ನು ಒಬ್ಬರೇ ಕಳುಹಿಸಲು ಭಯ ಪಡುವಂತಾಗಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರವು ತುಷ್ಠೀಕರಣದ ಕಡೆ ಗಮನ ಕೊಡುತ್ತಿದೆಯೇ ಹೊರತು ನೇಹಾಳಂತ ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್‍ಗೆ ಕಳಕಳಿ ಇಲ್ಲ. ಮತ ಬ್ಯಾಂಕ್‍ಗಾಗಿ ದೇಶ ವಿರೋಧಿ ಶಕ್ತಿಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಪಿಎಫ್‍ಐನಂತಹ ಸಂಘಟನೆಗಳ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಪಕ್ಷ ಕಾಂಗ್ರೆಸ್, ಆದರೆ ಬಿಜೆಪಿ ಪಿಎಫ್‍ಐನ್ನು ನಿμÉೀಧಿಸಿದೆ” ಎಂದು ತಿಳಿಸಿದರು.
ದೇಶ ವಿರೋಧಿಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಸಿಂಹಸ್ವಪ್ನ. ಮತ ಬ್ಯಾಂಕ್‍ಗೆ ಮಹಿಳೆಯರು, ಯುವತಿಯರು, ಬಡವರು, ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕಿನ ಹಣ, ಆಸ್ತಿ, ಮಹಿಳೆಯರ ಬಳಿ ಇರುವ ಒಡವೆ ಎಲ್ಲವನ್ನೂ ಎಕ್ಸ್-ರೇ ಮಾಡಲಿದ್ದಾರೆ. ಮಂಗಳಸೂತ್ರವನ್ನೂ ಲಪಟಾಯಿಸುವ ಸಂಚು ನಡೆಸಿದ್ದಾರೆ. ಮುಂದೆ ನಿಮ್ಮ ಸಂಪತ್ತನ್ನು ಲೂಟಿ ಮಾಡಿ ಅದನ್ನು ಕಾಂಗ್ರೆಸ್‍ನ ಮತ ಬ್ಯಾಂಕ್‍ಗೆ ಕೊಡಲಿದ್ದಾರೆ ಎಚ್ಚರವಾಗಿರಿ” ಎಂದು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಬ್ಬೊಬ್ಬರಂತೆ ಐವರು ಪ್ರಧಾನಿಯಾಗಲಿದ್ದಾರೆ. ಏಕ ವ್ಯಕ್ತಿ ಐದು ವರ್ಷ ಪ್ರಧಾನಿಯಾಗಿರಬೇಕೋ ಅಥವಾ ಐವರು ಆಗಬೇಕೋ. ದೇಶದ ಸುರಕ್ಷತೆ, ಅಭಿವೃದ್ಧಿ, ಭದ್ರತೆಯೇ ಮೋದಿ ಗ್ಯಾರಂಟಿ. ಮೇ.7ರಂದು ಮತದಾನವಾಗುತ್ತದೆ. ಮಹಿಳೆಯರು, ಯುವತಿಯರು, ಮೊದಲ ಬಾರಿ ಮತ ಚಲಾಯಿಸುವವರು ಯೋಚನೆ ಮಾಡಿ ಯೋಗ್ಯರಿಗೆ ಮತ ನೀಡಿ” ಎಂದು ಕರೆ ನೀಡಿದರು.
ಇವಿಎಂ ಯಂತ್ರದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್‍ಗೆ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದೆ. ಕಳೆದ ಬಾರಿ ಸೋತಾಗ ಇವಿಎಂ ದೂಷಿಸಿದ್ದರು. ಈ ಬಾರಿ ಸೋತರೆ ಯಾವ ಕಾರಣ ನೀಡುತ್ತಾರೆ, ಯಾರನ್ನು ದೂಷಿಸುತ್ತಾರೆ. ದೇಶದ ಮಹಿಳೆಯರೇ ಮೋದಿಯವರಿಗೆ ರಕ್ಷಾಕವಚ. ಅವರ ಆಶೀರ್ವಾದ ಬಿಜೆಪಿ ಮೇಲಿದೆ. ಹತ್ತು ವರ್ಷದಲ್ಲಿ ಮೋದಿ ಆಡಳಿತವನ್ನು ಜನರು ನೋಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ದೇಶದ ಮುನ್ನಡೆಗೆ ಶ್ರಮಿಸುತ್ತಿದೆ. ಆದರೆ, ಇಲ್ಲಿನ ಸರ್ಕಾರ ಹಿಂದಕ್ಕೆ ಕೊಂಡೊಯ್ಯುತ್ತಿದೆ. ಮೋದಿ ಮಂತ್ರವು ವಿಕಸಿತ ಭಾರತಕ್ಕೆ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ದೇಶದ ಏಕತೆ ಕೊನೆಗಾಣಿಸಿ, ಅಭಿವೃದ್ಧಿಗೆ ತಡೆ ಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ. ಎನ್‍ಡಿಎ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಿದೆ. ಕರ್ನಾಟಕ ಕಾಂಗ್ರೆಸ್‍ನಲ್ಲಿ ಒಳಜಗಳ ನಡೆಯುತ್ತಿದೆ. ನೂತನ ಶಿಕ್ಷಣ ನೀತಿ ರದ್ದುಗೊಳಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ. ನಮ್ಮ ಮತ್ತು ಅವರ ರಾಜಕೀಯ ಏನೇ ಇರಲಿ, ಪೆÇೀಷಕರು ಮತ್ತು ಮಕ್ಕಳಿಗೆ ತೊಂದರೆ ಕೊಡುವುದು ಎಷ್ಟು ಸರಿ. ಜನರಿಗೆ ತೊಂದರೆ ಕೊಡುವ ಅಧಿಕಾರ ಇಲ್ಲ” ಎಂದು ಗುಡುಗಿದರು.
ಬಸವಣ್ಣನವರ ನಾಡಿನಲ್ಲಿ ಕಾಂಗ್ರೆಸ್ ಬಹಳ ತಪ್ಪು ಮಾಡುತ್ತಿದೆ. ಭ್ರμÁ್ಟಚಾರ ಮಿತಿಮೀರಿದೆ. ತನ್ನ ಭ್ರμÁ್ಟಚಾರಕ್ಕೋಸ್ಕರ ಎಸ್‍ಸಿ/ಎಸ್‍ಟಿ, ಒಬಿಸಿ ಸಮುದಾಯಕ್ಕೆ ಮೀಸಲಾದ ಹಣವನ್ನು ಬಳಕೆ ಮಾಡುತ್ತಿದೆ. ಬಡವರು ಸೇರಿದಂತೆ ಎಲ್ಲ ವರ್ಗದವರಿಗೂ ದ್ರೋಹ ಬಗೆಯುತ್ತಿದೆ. ನಾವು ಒಂದು ರೂಪಾಯಿ ಕಳುಹಿಸಿದರೆ 15 ಪೈಸೆ ಮಾತ್ರ ಕರ್ನಾಟಕಕ್ಕೆ ಬಂದು ಮುಟ್ಟುತಿತ್ತು. ಲೂಟಿ ಹೊಡೆದ ಹಣವೆಲ್ಲಾ ಏನಾಯ್ತು? ಭ್ರμÁ್ಟಚಾರ ನಡೆಸುವವರು ಬೇಕೋ ವಿಕಸಿತ ಭಾರತಕ್ಕೆ ಶ್ರಮಿಸುವವರು ಬೇಕೋ. ಯೋಚನೆ ಮಾಡಿ ಮತಚಲಾಯಿಸಿ” ಎಂದು ಮನವಿ ಮಾಡಿದರು.
Comments are closed.