ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ವತಂತ್ರ ಕಲಾ, ವಿಜ್ಞಾನ, ವಾಣಿಜ್ಯ ಪಿಯು ಕಾಲೇಜಿಗೆ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ.
193 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 29 ಆಗ್ರಶ್ರೇಣಿ, 116 ಪ್ರಥಮ, 39 ದ್ವಿತೀಯ, 6 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ 98.44 ಪ್ರತಿಶತ ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ತಿಳಿಸಿದ್ದಾರೆ.
ಕಲಾವಿಭಾಗದಲ್ಲಿ 96.73 ಪ್ರತಿಶತ ಫಲಿತಾಂಶ ಬಂದಿದ್ದು ಇವರಲ್ಲಿ ಪವಿತ್ರಾ ಭಾಲ್ಕೇಡ 573 ಅಂಕಗಳು ಪಡೆದು 95.5 ಪ್ರತಿಶತ ಸಾಧನೆ ಮಾಡಿರುವಳು.
ವಿಜ್ಞಾನ ವಿಭಾಗದಲ್ಲಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಫಾತಿಮಾ ಬೆಗಂ 554 ಅಂಕಗಳು ಪಡೆದು 92.33 , ಸುದೀಪ 554 ಅಂಕಗಳು ಪಡೆದು 92.33 ಪ್ರತಿಶತ ಸಾಧನೆ ಮಾಡಿರುವರು.
ವಾಣಿಜ್ಯ ವಿಭಾಗದಲ್ಲಿ 93.61 ಪ್ರತಿಶತ ಫಲಿತಾಂಶ ಬಂದಿದೆ. ಇವರಲ್ಲಿ ಪೂಜಾ ಅಮೃತ ಇವಳು 524 ಅಂಕಗಳು ಪಡೆದು 87.33 ಪ್ರತಿಶತ ಸಾಧನೆ ಮಾಡಿರುವಳು. ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿರುವದಕ್ಕೆ ಸಂಸ್ಥೆ ಅಧ್ಯಕ್ಷ ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Comments are closed.