Shubhashaya News

ಗುತ್ತೇದಾರ ಕನ್ಯಾ ಪದವಿ ಪೂರ್ವ ಕಾಲೇಜಿಗೆ 95.35 ಫಲಿತಾಂಶ

ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕನ್ಯಾ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಪ್ರಾಪ್ತವಾಗಿದೆ.

ಪರೀಕ್ಷೆಗೆ ಕುಳಿತ ಕಾಲೇಜಿನ 86 ವಿದ್ಯಾರ್ಥಿನಿಯರಲ್ಲಿ 17 ವಿದ್ಯಾರ್ಥಿನಿಯರು ಅಗ್ರ ಶ್ರೇಣಿಯಲ್ಲಿ, 56 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿನಿಯರು ದ್ವೀತಿಯ ಶ್ರೇಣಿಯಲ್ಲಿ, 3 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾಲೇಜಿಗೆ ಪ್ರತಿಶತ 95.35 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನ ಧಾನಮ್ಮಾ ಶೇ. 93.66%, ಭಾಗ್ಯಲಕ್ಷ್ಮೀ ಶೇ. 93%, ರಾಧಿಕಾ ಶೇ. 92.33%, ಆಶಾರಾಣಿ ಶೇ. 92%, ಸಂಗೀತಾ ಶೇ. 90%, ಲಕ್ಷ್ಮೀ, ಶೇ. 90, ಪ್ರಿಯಾಂಕಾ ಶೇ. 90%, ಪೂಜಾ ಶೇ. 88.16% ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳೂ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

 

 

Comments are closed.

Don`t copy text!