Shubhashaya News

ಸಿಲಿಂಡರ್ ಸ್ಪೋಟ: ಮನೆಗೆ ಹಾನಿ

ಚಿತ್ತಾಪುರ: ಪಟ್ಟಣದ ಬಾಹರ್‍ಪೇಠ್‍ನ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ ಮನೆ ಹಾಗೂ ದವಸ ಧಾನ್ಯಗಳು ಸುಟ್ಟು ಕರಕಲಾಗಿದೆ.

ಪಟ್ಟಣದ ಬಾಹರ್‍ಪೇಠ್‍ದಲ್ಲಿ ಕೂಲಿ ಕೆಲಸ ಮಾಡುವ ಬಡ ಮಹಿಳೆಯ ಮನೆಯಲ್ಲಿ ಇದ್ದ ಸಿಲಿಂಡರ್ ಸ್ಪೋಟಗೊಂಡು ಮನೆ ಹಾಗೂ ಮನೆಯಲ್ಲಿದ್ದ ದವಸ ಧಾನ್ಯ ಮತ್ತು ಕಾಗದ ಪತ್ರಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಮನೆ ಕೆಲಸ ಮುಗಿಸಿಕೊಂಡು ಹೊಲದಲ್ಲಿ ಕೂಲಿ ಕೆಲಸ ಮಾಡಲು ಜಗಮ್ಮ ಎನ್ನುವವರು ಹೋಗಿದ್ದಾರೆ. ಬೆಳಗ್ಗೆ ಸುಮಾರು ಹತ್ತು ಗಂಟೆ ಸುಮಾರಿಗೆ ಮನೆಯಲ್ಲಿದ್ದ ಭಾರತ ಗ್ಯಾಸ್ ಏಜೆನ್ಸಿಯವರ ಗ್ಯಾಸ್ ಸ್ಪೋಟಗೊಂಡಿದೆ. ಮನೆಯಲ್ಲಿ ಯಾರು ಇಲ್ಲದೇ ಇರುವ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ. ಮನೆ ಹಾಗೂ ಮನೆಯಲ್ಲಿದ್ದ ದವಸ ಧಾನ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಅಂದಾಜು 25 ಸಾವಿರ ರೂ. ಹಾನಿಯಾಗಿದ್ದು, ಅಗ್ನಿಶಾಮಕ ಠಾಣೆಯವರು ಬಂದು ಬೆಂಕಿಯನ್ನು ನಂದಿಸಿದ್ದಾರೆ.
ಜಗಮ್ಮ ಇವರು ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದು ಕಡು ಬಡವರಾಗಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮನೆ ಹಾಗೂ ಮನೆಯಲ್ಲಿದ್ದ ಸಾಮಾನು, ಕೂಲಿ ಮಾಡಿ ಸಂಪಾದಿಸಿದ ದವಸ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಆದ್ದರಿಂದ ಕೂಡಲೇ ನಷ್ಟವನ್ನು ಭರಿಸಲು ಗ್ಯಾಸ್ ಏಜೆನ್ಸಿಯವರು ಸೂಕ್ತ ಪರಿಹಾರ ನೀಡಬೇಕು ಮತ್ತು ಸರ್ಕಾರದಿಂದ ಬರುವ ಸೌವಲತ್ತುಗಳು ನೀಡಬೇಕು ಎಂದು ಪುರಸಭೆ ಸದಸ್ಯರಾದ ಶಿವರಾಜ ಪಾಳೇದ್, ರಮೇಶ ಬಮ್ಮನಳ್ಳಿ ಒತ್ತಾಯಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಿಎಸ್‍ಐ ಮಂಜುನಾಥರೆಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.