
ವೈಜಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು. ಸಂತೋಷ ಹಾದಿಮನಿ,ವೀರಣ್ಣ ಮಂಗಾಣೆ, ಮಲ್ಲಿಕಾರ್ಜುನ ತಡಕಲ, ಆನಂದರಾವ ಪಾಟೀಲ ಸೇರಿದಂತೆ ಇತರರು ಇದ್ದರು.
ಆಳಂದ ತಾಲೂಕಿನ ವೈಜಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಶನಿವಾರ ಚಾಲನೆ ನೀಡಿದರು.
ವೈಜಾಪುರ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಹತ್ತಿರ 30 ಲಕ್ಷ.ರೂ ವೆಚ್ಚದ ಸಿಸಿ ರಸ್ತೆ ಹಾಗೂ ಎಸ್‍ಪಿಪಿ ಅನುದಾನದಲ್ಲಿ 55 ಲಕ್ಷ.ರೂ ವೆಚ್ಚದ ರುದ್ರಭೂಮಿಗೆ ಆವರಣ ಗೋಡೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿದ ಶಾಸಕರು, ನಿಂಬರ್ಗಾ ವಲಯದ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತೆಗೆದುಕೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದೆ ಈ ಕಾಮಗಾರಿಗಳು ಶಾಶ್ವತ ಕಾಮಗಾರಿಗಳಾಗಿದ್ದು ಜನರ ಆಶೋತ್ತರದಂತೆ ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಶಕ್ತಿ ಮೀರಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಲಹೆ ನೀಡಿದರು’
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರಿಗೆ ಬೆಳ್ಳಿ ಕೀರಿಟ ತೊಡಿಸಿ ಸನ್ಮಾನಿಸಿದರು. ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಎನ್‍ಈಕೆಆರ್‍ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಮುಖಂಡರಾದ ರಾಜು ಪಾಟೀಲ, ಶರಣಯ್ಯ ಸ್ವಾಮಿ, ಪ್ರಭು ಅಷ್ಟಗಿ, ರೇವಪ್ಪ ಪೊಲೀಸ ಪಾಟೀಲ, ಗಂಗಯ್ಯ ಸ್ವಾಮಿ, ಗುರಣಪ್ಪ ಬಿರಾದಾರ, ನಾಗರಾಜ ಬಿರಾದಾರ, ಬಸವರಾಜ ಪಾಟೀಲ, ಸುಜಾತಾ ಎಸ್ ಸೇರಿದಂತೆ ಇತರರು ಇದ್ದರು.