ಅಫಜಲಪುರ: ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಫಜಲಪುರ ತಾಲೂಕಿನಲ್ಲಿ ಇಂದು ಹಗಲು-ರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಮುಖಂಡ ಗುರು ಚಾಂದಕವಟೆ ಮಾತನಾಡಿ 8.5 ರಿಕವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಬೇಕು, ಎಫ್ಆರ್ಪಿ (FRP) ದರವನ್ನು ₹5,500ಕ್ಕೆ ಹೆಚ್ಚಿಸಬೇಕು ಹಾಗೂ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ರಮೇಶ ಪಾಟೀಲ ಮಾತನಾಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅನೇಕ ರೈತರ ಕಬ್ಬಿನ ಬೆಳೆ ಸುಟ್ಟುಹೋಗುತ್ತಿರುವುದು ಹಾಗೂ ಕಬ್ಬು ಒಣಗುತ್ತಿರುವುದರಿಂದ ಕಾರ್ಖಾನೆಗಳನ್ನು ವಿಳಂಬ ಮಾಡದೆ ನವೆಂಬರ್ 1ರಿಂದಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ವಕೀಲರಾದ ಕೆ.ಜಿ.ಪೂಜಾರಿ ಮಾತನಾಡಿ ರೈತನ ಆತ್ಮ ಕಳಕಳಿ ಎಂದರೆ ನಿಮಗೆ ಒಳ್ಳೆಯದು ಆಗಲ್ಲ , ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಯೊಗ್ಯವಾದ ಬೆಲೆ ನೀಡಬೇಕು ,ರೈತರು ಹೋರಾಟ ಮಾಡುವುದು ತಮ್ಮ ಬೇಡಿಕೆಗಾಗಿ ಅರ್ಥಪೂರ್ಣವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಲತೀಪ್ ಪಟೇಲ, ರಮೇಶ್ ಶೆಟ್ಟಿ, ಶಾಂತು ಅಂಜುಟಗಿ, ಭೀಮರಾಯ ಗೌರ, ಅಣ್ಣಾರಾಯ ಪಾಟೀಲ್,ನಾಮದೇವ ಕಡಕೋಳ, ಸದಾನಂದ ಹಿರಿಯಾಳ, ಶರಣಗೌಡ ಪಾಟೀಲ್, ಲತೀಪ್ ಪಟೇಲ್, ಸಿದ್ದು ದೇವರನಾವದಗಿ, ಬಸು ಮಂಗಳೂರು, ಚಂದು ಕರಜಗಿ, ಬಸವರಾಜ ಪಾಟೀಲ್, ಅವಣ್ಣ ಪೂಜಾರಿ, ಅವಧೂತ ಚಂದು ಬನ್ನೆಟಿ, ತುಕಾರಾಮ ಸಿಂದೆ, ನಾಮದೇವ ಕಡಕೋಳ, ಮಹಾದೇವಪ್ಪ ಕಲಕೇರಿ, ಸಂಗಣ್ಣ ವಾಲಿ,ಅಶೋಕ ಬಟಗೇರಿ, ಮಳೆಪ್ಪ ಡಾಂಗೆ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರು ಭಾಗವಹಿಸಿದ್ದರು.