Shubhashaya News

ಪತ್ರಕರ್ತರಿಗೆ ಆಹಾರಧಾನ್ಯದ ಕಿಟ್ ವಿತರಣೆ

ಚಿತ್ತಾಪುರ: ಪಟ್ಟಣದಲ್ಲಿ ತಾಲೂಕು ಬಿಜೆಪಿ ವಕ್ತಾರ ಮಹೇಶ ಬಟಗೇರಿ ಅವರು ವೈಯಕ್ತಿಕವಾಗಿ ಪತ್ರಕರ್ತರಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು.

ಚಿತ್ತಾಪುರ: ಕೊರೊನಾ ಎರಡನೇ ಅಲೆಯ ಸಂಕಷ್ಟದಲ್ಲಿ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿರುವ ಚಿತ್ತಾಪುರ ಪತ್ರಕರ್ತರಿಗೆ ಬಿಜೆಪಿ ವಕ್ತಾರ ಮಹೇಶ ಬಟಗೇರಿ ವೈಯಕ್ತಿಕವಾಗಿ ಆಹಾರಧಾನ್ಯದ ಕಿಟ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಸಮ್ಮುಖದಲ್ಲಿ ವಿತರಿಸಿದರು.
5 ಕೆ.ಜಿ ಅಕ್ಕಿ, 3 ಕೆಜಿ ಸಕ್ಕರೆ, 2 ಕೆಜಿ ತೊಗರಿ ಬೇಳೆ, 2 ಕೆಜಿ ಗೋಧಿ ಹಿಟ್ಟು, 1 ಕೆಜಿ ಅಡುಗೆ ಎಣ್ಣೆ, ಖಾರಾದ ಪ್ಯಾಕೇಟ್, ಉಪ್ಪಿನ ಪ್ಯಾಕೇಟ್, ಬಟ್ಟೆ ತೋಳೆಯುವ ಸಾಬೂನ್, ಜೀರಗಿ ಒಳಗೊಂಡ ಕಿಟ್‍ಗಳನ್ನು ವಿತರಿಸಿದರು.
ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಶಶೀಲ್ ನಮೋಶಿ, ಬಿ.ಜಿ ಪಾಟೀಲ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ಬಸವರಾಜ ಬೆಣ್ಣೂರಕರ್, ಸೋಮಶೇಖರ ಪಾಟೀಲ್ ಬೆಳಗುಂಪಾ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಪೂಜಾರಿ, ರವೀಂದ್ರ ಸಜ್ಜನಶೆಟ್ಟಿ, ಡಾ. ಮಹೇಂದ್ರ ಕೋರಿ, ತಮ್ಮಣ್ಣ ಡಿಗ್ಗಿ, ಮಹ್ಮದ್ ಯೂನೂಸ್, ರಮೇಶ ಕಾಳನೂರ ಇದ್ದರು.

Leave A Reply

Your email address will not be published.