ಆಳಂದ: ಪಟ್ಟಣದ ಶ್ರೀ ಶಕ್ತಿ ಭವಾನಿ ಮಂದಿರ ಸ್ವಕುಳ ಸಾಳಿ ಸಮಾಜಸಮಾಜ ಬಾಂಧವರಿoದ ಶ್ರಾವಣ ಮಾಸದಂಗವಾಗಿ ಪ್ರತಿವರ್ಷದ ಪದ್ಧತಿಯಂತೆ ಬುಧವಾರ ಭಗವಾನ ಶ್ರೀ ಜೀವೇಶ್ವರ ಜನ್ಮೋತ್ಸವ ನಿಮಿತ್ತವಾಗಿ ಬೆಳಗಿನ ಜಾವ ವಿಶೇಷ ಪೂಜೆ ಬಳಿಕ ಪ್ರಮುಖ ರಸ್ತೆಗಳ ಮಾರ್ಗವಾಗಿ ಪಲ್ಲಕ್ಕಿ ಹಾಗೂ ಭಗವಾನ ಶ್ರೀ ಜೀವೇಶ್ವರ ಭಾವಚಿತ್ರ ಪಲ್ಲಕ್ಕಿ ಮೆರವಣಿಗೆ ಭಜನೆ, ವಾದ್ಯ ವೈಭವ ಕುಂಬ, ಕಳಸದೊಂದಿಗೆ ಸಂಭ್ರಮದೊAದಿಗೆ ಸಾಗಿ ದೇವಸ್ಥಾನಕ್ಕೆ ತಲುಪಿದ ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಬೆಳಗಿನ ಜಾವ ಧರ್ಮಧ್ವಜಾರೋಹಣ, ರುದ್ರಾಭಿಷೇಕ ಪೂಜೆ ಪಲ್ಲಕ್ಕಿ ಉತ್ಸವ ನಡೆಯಿತು. ಪಟ್ಟಣದ ನಾಗರಿಕ ಬಂದುಗಳು ಆಗಮಿಸಿ ದರ್ಶನ ಪ್ರಸಾದ ಸ್ವೀಕರಿಸಿದರು.
ಕಮೀಟಿ ಅಧ್ಯಕ್ಷ ಪ್ರವೀಣ ಚಿಲ್ಲಾಳ, ಕಾರ್ಯದರ್ಶಿ ಚಕ್ರಪಾಣಿ ಸೂರೆ, ರವಿಕುಮಾರ ಢಗೆ, ನ್ಯಾಯವಾದಿ ಎಂ.ವಿ.ಏಕಬೋಟೆ, ವೆಂಕಟೇಶ ಏಕಬೋಟೆ, ಮಹೇಶ ಸೂರೆ, ವಿವೇಕಾನಂದ ಏಕಬೋಟೆ, ಪ್ರವೀಣ ಢಗೆ, ದತ್ತಾ ಕಾಂಬಳೆ ಮತ್ತು ಚಂದ್ರಕಾoತ ಸೂರೆ, ಮಹೇಶ ಸೂರೆ ಸೇರಿದಂತೆ ಮಹಿಳೆಯರು, ಯುವಕರು ಹಿರಿಯರು ಭಾಗವಹಿಸಿದ್ದರು.