ಆಳಂದ: ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಭವ್ಯ ಮೆರವಣಿಗೆ ಸಡಗರ, ಸಂಭ್ರಮದಿoದ ನಡೆಯಿತು.
ಪಟ್ಟಣದ ದಾರುಲಂನಿoದ ಆರಂಭಗೊoಡ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳ ಸಮುದಾಯ ಬಾಂಧವರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಧಾರ್ಮಿಕ ಕ್ಷೇತ್ರಗಳು ಹಾಗೂ ಇಸ್ಲಾಮಿಕ್ ಪರಂಪರೆಯನ್ನು ಬಿಂಬಿಸುವ ವಿವಿಧ ಸ್ತಬ್ಧಚಿತ್ರಗಳನ್ನು ಥರ್ಮಾಕೋಲ್ ಸೇರಿದಂತೆ ವಿವಿಧ ಪರಿಕರಗಳಿಂದ ಆಕರ್ಷಕವಾಗಿ ಸಿದ್ಧಪಡಿಸಲಾಗಿತ್ತು.
ಭಕ್ತಿಗೀತೆ, ಪ್ರಾರ್ಥನೆ ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಸಾಗಿದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು. ಸ್ತಬ್ಧಚಿತ್ರಗಳಲ್ಲಿ ಭಾಗವಹಿಸಿದ್ದವರು ಸಾಂಪ್ರದಾಯಿಕ ಉಡುಗೆ ತೊಟ್ಟು ಧಾರ್ಮಿಕ ಭಾವೈಕ್ಯತೆಯನ್ನು ಮೆರೆದರು.
ಮೆರವಣಿಗೆ ಆರಂಭದ ವೇಳೆ ರಾಜಕೀಯ ಗಣ್ಯರು, ಸಾಮಾಜಿಕ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು. ಮೆರವಣಿಗೆಯುದ್ದಕ್ಕೂ ಹಬ್ಬದ ಸಂಭ್ರಮ ಮನೆಮಾಡಿತ್ತು.
Next Post