Shubhashaya News

ಕಲಬುರಗಿಯಲ್ಲಿ ರಫ್ತು ನಿರ್ವಹಣಾ ತರಬೇತಿ: ಉದ್ದಿಮೆದಾರರು ಹೆಸರು ನೋಂದಣಿಗೆ ಸೂಚನೆ

ಕಲಬುರಗಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಂಗ ಸಂಸ್ಥೆಯಾದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ರಫ್ತು ಸೌಲಭ್ಯ ಕೇಂದ್ರದ ಕಲಬುರಗಿ ವತಿಯಿಂದ 2026ರ ಅಕ್ಟೋಬರ್ 12 ರಿಂದ 17 ರವರೆಗೆ 6 ದಿನಗಳ ಕಾಲ ಕಲಬುರಗಿಯಲ್ಲಿ “ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ” (Export Management Training Programme) ವನ್ನು ಹಮ್ಮಿಕೊಳ್ಳಲಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು ತಿಳಿಸಿದ್ದಾರೆ.

ರಫ್ತಿನ ಬಗ್ಗೆ ಆಸಕ್ತಿಯುಳ್ಳ ಕಲ್ಯಾಣ ಕರ್ನಾಟಕ ಭಾಗದ ಉದ್ದಿಮೆದಾರರು, ವ್ಯಾಪಾರಿಗಳು ಹಾಗೂ ಯುವಕ-ಯುವತಿಯರು ಈ ತರಬೇತಿಗಾಗಿ ವಿ.ಟಿ.ಪಿ.ಸಿ. www.vtpc.karnataka.gov.in ವೆಬ್‍ಸೈಟ್‍ದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ, ಒಟ್ಟು ಸೇವಾ ಶುಲ್ಕ ರೂ.5,900/- ವನ್ನು ವಿ.ಟಿ.ಪಿ.ಸಿ., ಬೆಂಗಳೂರು ಸಂಸ್ಥೆಗೆ ಪಾವತಿಸಬೇಕು. ಈ ತರಬೇತಿ ಸಮಯದಲ್ಲಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಾಫರ್ ಖಾಸಿಮ್ ಅನ್ಸಾರಿ, ಸಹಾಯಕ ನಿರ್ದೇಶಕರು, ವಿ.ಟಿ.ಪಿ.ಸಿ., ರಫ್ತು ಸೌಲಭ್ಯ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, 1ನೇ ಮಹಡಿ, ಜೇವರ್ಗಿ ಕ್ರಾಸ್, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9880087863 ಗೆ ಸಂಪರ್ಕಿಸಲು ಕೋರಲಾಗಿದೆ.

Leave A Reply

Your email address will not be published.