Shubhashaya News

ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಹೆಚ್.ಎ.ಎಲ್. ದಲ್ಲಿ ಅಪ್ರೆಂಟಿಸ್ ತರಬೇತಿ

ಕಲಬುರಗಿ: ಬೆಂಗಳೂರಿನ ಹೆಚ್.ಎ.ಎಲ್.ದಲ್ಲಿ ಐ.ಟಿ.ಐ. ವೃತ್ತಿಗಳಾದ ಫಿಟ್ಟರ್, ಟರ್ನರ್, ಮಶಿನಿಸ್ಟ, ಎಲೆಕ್ಟ್ರಿಷಿಯನ್, ವೆಲ್ಡರ್, ಫೌಂಡ್ರಿಮನ್, ಶೀಟ್ ಮೇಟಲ್ ವರ್ಕ್, ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಕಾರ್ಪೇಂಟರ್, ಟೂಲ್ ಆಂಡ್ ಡೈ ಮೇಕರ್, ಸಿಎನ್‍ಸಿ. ಪ್ರೋಗ್ರಾಮರ್ ಕಮ್ ಆಪರೇಟರ್, ಮೆಕ್ಯಾನಿಕ್ ರೆಫ್ರಿಜಿರೇಷನ್ ಮತ್ತು ಏರ್‍ಕಂಡಿಶನಿಂಗ್ ಟ್ರೇಡ್‍ಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಅಪ್ರೆಂಟಿಸ್ ತರಬೇತಿ ಹೊಂದಲು ಇಚ್ಛೆ ಹೊಂದಿದ್ದಲ್ಲಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು www.apprenticeship.gov.in ವೆಬ್‍ಸೈಟ್‍ದಲ್ಲಿ ನೋಂದಾಯಿಸಿ ವೆಬ್‍ಪೋರ್ಟಲ್ ಸಂಖ್ಯೆಯೊಂದಿಗೆ ಭರ್ತಿ ಮಾಡಿರುವ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಹಾಗೂ ಐ.ಟಿ.ಐ ಪಾಸಾದ ಅಂಕಪಟ್ಟಿ, ಆಧಾರ್‍ಕಾರ್ಡ ಹಾಗೂ ಮೀಸಲಾತಿ ಬಯಸಿದ್ದಲ್ಲಿ ಎಸ್ಸಿ/ಎಸ್ಟಿ, ಓಬಿಸಿ, ಅಂಗವಿಕಲ ಮತ್ತು ಆಮ್ರ್ಡ ಪೋರ್ಸ್ ಪ್ರಮಾಣ ಪತ್ರ ಹೊಂದಿದ್ದಲ್ಲಿ ಮತ್ತು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2026ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು, ಕಚೇರಿ ದೂರವಾಣಿ ಸಂಖ್ಯೆ 08472-274846ನ್ನು ಸಂಪರ್ಕಿಸಲು ಹಾಗೂ www.apprenticeship.gov.in ವೈಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.

Leave A Reply

Your email address will not be published.