ಅಫಜಲಪುರ: ತಾಲೂಕಿನ ಹಿಂಚಗೇರಾ ಗ್ರಾಮದ ಹಿರಿಯ ಜೀವಿ ನೀಲಮ್ಮ ಶಿವರಾಯ ಶಿವಣಗಿ (73) ಅವರು ಮಂಗಳವಾರ ಸಂಜೆ 7.15ಕ್ಕೆ ನಿಧನರಾದರು.
ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹಿಂಚಗೇರಾದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಅಫಜಲಪುರದ ವಾರ್ತಾ ಭಾರತಿ ಪತ್ರಿಕೆಯ ಅರೆಕಾಲಿಕ ವರದಿಗಾರ ಸಿದ್ಧರಾಮ ಶಿವಣಗಿ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.