ಆಳಂದ: ಪಟ್ಟಣದ ಜೆಸ್ಕಾಂ ಕಚೇರಿಯ ಮುಂದೆ ಕೊರಳ್ಳಿ ಪಂಪಸೆಟ್ ರೈತರು ಸಮರ್ಪಕ ವಿದ್ಯುತ್‌ಗಾಗಿ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಕೊರಳ್ಳಿ ಗ್ರಾಮದ ಪಂಪ್‌ಸೆಟ್ ರೈತರು ಪಟ್ಟಣದಲ್ಲಿ ಜೆಸ್ಕಾಂ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಹಲಗೆ ಬಾರಿಸಿ ಪ್ರತಿಭಟನಾ ಧರಣಿ ನಡೆಸಿ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರೈತರಿಗೆ ನಿಗದಿಪಡಿಸಿದ ೭ ಗಂಟೆಗಳ ವಿದ್ಯುತ್ ಪೂರೈಕೆಯನ್ನು ನಿರಂತರವಾಗಿ ನೀಡುವ ಬದಲು ಗಂಟೆಗೊಮ್ಮೆ ಕಡಿತಗೊಳಿಸಲಾಗುತ್ತಿದೆ, ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಟ್ರಾನ್ಸ್ಫಾರ್ಮರ್‌ಗಳು ಸುಟ್ಟರೂ ಸಕಾಲಕ್ಕೆ ದುರಸ್ತಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಅಮರ್ಜಾ ಆಣೆಕಟ್ಟು ಮಾರ್ಗದ ಶಿಫ್ಟ್ವೈಸ್ ವಿದ್ಯುತ್ ಪದ್ಧತಿ ರದ್ದುಪಡಿಸಿ ಎಲ್ಲರಿಗೂ ಸಮಾನ ವಿದ್ಯುತ್ ನೀಡಬೇಕು ಹಾಗೂ ರಾತ್ರಿ ವೇಳೆ ಸಿಂಗಲ್‌ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ರೈತ ಮನವಿ ಸ್ವೀಕರಿಸಿದ ಜೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್ ಅವರು, ಮಳೆಯ ಕೊರತೆಯಿಂದಾಗಿ ಟ್ರಾನ್ಸಫಾರಂಗಳ ಮೇಲೆ ಭಾರ ಹೆಚ್ಚಾಗಿ ತಾಂತ್ರಿಕ ತೊಂದರೆಯಿAದ ವಿದ್ಯುತ್ ಕಡಿತಗೊಂಡು ಸಮಸ್ಯೆ ಎದುರಾಗುತ್ತಿದೆ. ಇದನ್ನು ಸರಿಪಡಿಸಿ ಪೂರೈಕೆಗೆ ಕ್ರಮವಹಿಸಲಾಗುತ್ತಿದೆ ಕಾಲಾವಕಾಶ ನೀಡಿ ರೈತರೊಂದಿಗೆ ಜೆಸ್ಕಾಂ ಸಹಕಾರಕ್ಕೆ ಬದ್ಧವಾಗಿದೆ.
ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಇದರೊಂದಿಗೆ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಶಾಖಾ ಇಂಜಿನಿಯರ್ ರಜನೇಶ್ ಜಂಗಲೆ ಸೇರಿ ಸಿಬ್ಬಂದಿಗಳಿ ಹಾಜರಿದ್ದರು.
ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯ ಚಂದ್ರಕಾAತ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ವಾರದ, ಮುಖಂಡ ನಿಜಲಿಂಗಪ್ಪ ರಾಮಶೆಟ್ಟಿ, ಪ್ರದೀಪ ಪಟ್ಟಣ, ಮೋತಿರಾಮ ಪವಾರ, ಬಸವರಾಜ ಮಡಿವಾಳ, ಮಹೇಶ ವಾರದ, ಅಭಿಷೇಕ ಪಾಟೀಲ, ಬಸವರಾಜ ಕುಂಬಾರ,ಶೇಖರ ಕೊಗನೂರ, ಶ್ರೀಮಂತ ಉಡಗಿ, ನಾಗೇಂದ್ರ ಸಾರವಾಡ, ಈರಣ್ಣ ಪಟ್ಟಣ, ಸಿದ್ರಾಮಪ್ಪ ಆಲಮೇಲ್, ಸುಭಾಷ ಪವಾರ ಸೇರಿದಂತೆ ಕೊರಳ್ಳಿ ಗ್ರಾಮದ ಪಂಪ್‌ಸೆಟ್ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಇದೇ ವೇಳೆ ಗೊಳ್ಳೊಳ್ಳಿ ಮತ್ತು ಸಂಗೋಳಗಿ ಗ್ರಾಮಗಳ ಪಂಪಸೆಟ್ ರೈತರ ಸಹ ಹಾಜರಿದ್ದು, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್ ಅವರಿಗೆ ಸಮರ್ಪಕ ವಿದ್ಯುತ್ ಹಾಗೂ ಸಂಪರ್ಕ ನೀಡುವಂತೆ ಒತ್ತಾಯಿಸಿದ ಅವರು ವಿದ್ಯುತ್ ಇಲ್ಲದಕ್ಕೆ ಬೆಳೆ ಒಣಗಿ ಹಾಳಾಗುತ್ತಿದೆ ಎಂದು ಗಮನಕ್ಕೆ ತಂದರು.