Shubhashaya News

ಆಳಂದದಲ್ಲಿ ಭಕ್ತಿಭಾವದಿಂದ ಚೌಡೇಶ್ವರಿ ಜಾತ್ರೆ ಆರಂಭ

ಆಳಂದ: ಪಟ್ಟಣದಲ್ಲಿ ನಡೆಯಲಿರುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯ ಮುನ್ನದಿನ ದೇವಸ್ಥಾನದಲ್ಲಿ ಮೂರ್ತಿಸ್ಥಾಪನೆ ಹಾಗೂ ಜಾತ್ರೆ ಆರಂಭಕ್ಕೆ ಭಕ್ತಾದಿಗಳು ಚಾಲನೆ ನೀಡಿದರು.

 

 


ಬಾಜಾ-ಭಜAತ್ರಿ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ; ಎರಡು ದಿನ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮಆಳAದ: ಪಟ್ಟಣದ ಕುಂಬಾರ ಬಡಾವಣೆಯ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಗುರುವಾರ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಆರಂಭಗೊAಡಿತು. ಮೇ ೧೫ ಮತ್ತು ೧೬ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಜಾತ್ರೆ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭವ್ಯ ಮೆರವಣಿಗೆಗಳ ಮೂಲಕ ವಿಶೇಷ ಮೆರುಗು ಪಡೆದುಕೊಂಡಿದೆ.
ಜಾತ್ರೆ ಅಂಗವಾಗಿ ಗುರುವಾರ ಶ್ರೀರಾಮ ಮಾರುಕಟ್ಟೆಯಿಂದ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಬಾಜಾ-ಭಜಂತ್ರಿ, ಡೊಳ್ಳು ವಾದ್ಯಗಳು ಹಾಗೂ ಭಕ್ತರ ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದು ದೇವಸ್ಥಾನಕ್ಕೆ ತಲುಪಿಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಭಕ್ತಿಭಾವ ವ್ಯಕ್ತಪಡಿಸಿದರೆ, ಯುವಕರು ವಾದ್ಯಗಳೊಂದಿಗೆ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ದೇವಸ್ಥಾನ ತಲುಪಿದ ಬಳಿಕ ವಿಶೇಷ ಪೂಜೆ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಮೇ ೧೫ರಂದು ಬೆಳಗಿನ ಜಾವ ಭಕ್ತಾದಿಗಳಿಂದ ದೇವಿಗೆ ಅಭಿಷೇಕ, ಪ್ರಾಣಪ್ರತಿಷ್ಠಾಪನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಬಳಿಕ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದ್ದು, ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಮೇ ೧೬ರಂದು ಬೆಳಗ್ಗೆ ೮ ಗಂಟೆಗೆ ದೇವಿಯ ಮುಖ ತೊಳೆಯುವ ವಿಶೇಷ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ೨ ಗಂಟೆಗೆ ದೇವಿಯ ಮುಖವಾಡ ಧರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಭಕ್ತರ ಮನೆಮನೆಗೆ ತೆರಳಿ ದೇವಿಯ ದರ್ಶನ ನೀಡಲಾಗುವುದು. ರಾತ್ರಿ ೧೨ ಗಂಟೆಗೆ ಮೆರವಣಿಗೆ ದೇವಸ್ಥಾನಕ್ಕೆ ತಲುಪುವ ಮೂಲಕ ಜಾತ್ರಾ ಮಹೋತ್ಸವ ಸಮಾಪ್ತಿಗೊಳ್ಳಲಿದೆ.
ಜಾತ್ರೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಬೇಕು ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಜಯಪ್ರಕಾಶ ಕುಂಬಾರ ಹಾಗೂ ಕಾರ್ಯದರ್ಶಿ ಮಲ್ಲಿಕಾರ್ಜುನ ಚಂದ್ರಾಮಪ್ಪ ಕುಂಬಾರ ಮನವಿ ಮಾಡಿದ್ದಾರೆ.
ಜಾತ್ರಾ ಉತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಜಯಪ್ರಕಾಶ ಕುಂಬಾರ, ಮಲ್ಲಿಕಾರ್ಜುನ ಎಸ್. ಕುಂಬಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಚಂದ್ರಾಮಪ್ಪ ಕುಂಬಾರ, ಕುಂಬಾರ ಸಮಾಜ ತಾಲೂಕು ಅಧ್ಯಕ್ಷ ಶರಣು ಟಿ. ಕುಂಬಾರ, ಹಿರಿಯ ದತ್ತಾತ್ರೆಯ ಎಸ್. ಕುಂಬಾರ, ಸಿದ್ಧು ಬಿ. ಕುಂಬಾರ, ದತ್ತು ಪರಿಟ್, ವೈಶಾಲಿ ಕುಂಬಾರ, ಸರೋಜಾ ಕುಂಬಾರ, ಮಹಾನಂದ ಕುಂಬಾರ, ಜಾನವಿ ಕುಂಬಾರ, ಸುನಿತಾ ಕುಂಬಾರ, ಪಾರ್ವತಿ ಬಿ. ಕುಂಬಾರ, ಲಕ್ಷ್ಮೀ ಎಸ್. ಕುಂಬಾರ, ನಿಲಕಂಠ ಕುಂಬಾರ ಬಿಜಾಪೂರ, ಚೌಡೇಶ್ವರಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಗಂಗಾಬಾಯಿ ಜೆ. ಕುಂಬಾರ ಸೇರಿದಂತೆ ಸಮಸ್ತ ಕುಂಬಾರ ಸಮಾಜದ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Comments are closed.

Don`t copy text!