Shubhashaya News

ಕೋತನಹಿಪ್ಪರಗಾ ಶ್ರೀ ಶರಣಬಸವೇಶ್ವರ ಜಾತ್ರೆ ರಥೋತ್ಸವ ಸಂಭ್ರಮ

ಆಳಂದ: ಕೋತನಹಿಪ್ಪರಗಾ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ರಥೋತ್ಸವದಲ್ಲಿ ಡಾ. ಚನ್ನಬಸವ ಶಿವಾಚಾರ್ಯರು ಚಾಲನೆ ನೀಡಿದರು.

ಆಳಂದ: ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಾಗೂ ಶರಣೆ ಸುಂದರಮ್ಮ ತಾಯಿಯ ಪುಣ್ಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಮಹಾ ರಥೋತ್ಸವದ ದಿನ ಬೆಳಗಿನ ಜಾವದಲ್ಲಿಯೇ ಶ್ರೀ ಶರಣಬಸವೇಶ್ವರ ದೇವರ ಮೂರ್ತಿಗೆ ವಿಶೇಷ ಅಭಿμÉೀಕ, ಅಲಂಕಾರ ಹಾಗೂ ಭಕ್ತಿಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನದ ಹೊತ್ತಿಗೆ ಪ್ರಮುಖ ರಸ್ತೆಯ ಮಾರ್ಗದಲ್ಲಿ ಭವ್ಯ ಪಲ್ಲಕ್ಕಿ ಉತ್ಸವ ಮತ್ತು ನಂದಿ ಕೋಲ ಉತ್ಸವ ವಿಜೃಂಭಣೆಯಿಂದ ನಡೆದು, ರಥೋತ್ಸವ ಸ್ಥಳಕ್ಕೆ ತಲುಪಿದ ಬಳಿಕ ಆಳಂದ, ನಂದವಾಡಗಿ, ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀಗಳು ವಿಧಿವತ್ತಾಗಿ ಪೂಜೆ ನೆರವೇರಿಸಿ ರಥಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ತದನಂತರ ಪುರವಂತರು ಮತ್ತು ಭಕ್ತ ಸಮೂಹ ಭಜನೆ, , ಜಯಘೋಷಗಳ ನಡುವೆ ರಥವನ್ನು ಭಕ್ತಿ ಉತ್ಸಾಹದಿಂದ ಎಳೆದರು.
ರಥೋತ್ಸವ ಬಳಿಕ ಪೂಜ್ಯ ಡಾ. ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಅವರು ನೆರೆದಿದ್ದ ಅಪಾರ ಭಕ್ತ ಸಮೂಹವನ್ನು ಉದ್ದೇಶಿಸಿ ಅಮೃತ ಆಶೀರ್ವಚನ ನೀಡಿದರು. ಶರಣ ಸಂಸ್ಕøತಿಯ ಮಹತ್ವ, ಬಸವಣ್ಣನವರ ತತ್ತ್ವಗಳ ಅನುಸರಣೆ ಹಾಗೂ ಗ್ರಾಮೀಣ ಸಾಮರಸ್ಯಕ್ಕೆ ಶರಣಬಸವೇಶ್ವರ ಜೀವನ ನಡೆ ನುಡಿಗಳು ಆಚರಣೆಯಿಂದ ಜೀವನದಲ್ಲಿ ಸುಖ ಸಮೃದ್ಧಿಗೆ ದಾರಿಯಾಗಲಿದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.
ರಥೋತ್ಸವದಲ್ಲಿ ಗ್ರಾಮದ ಜನರμÉ್ಟೀ ಅಲ್ಲದೇ ನೆರೆಯ ಹತ್ತರಗಾ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತಾದಿಗಳು ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದರು. ಗ್ರಾಮದ ಹಿರಿಯರಾದ ಬಸಯ್ಯ ಸ್ವಾಮಿ ಮಠಪತಿ ಮತ್ತು ಗ್ರಾಮದ ತಾಯಂದಿರು ಹಾಗೂ ಶರಣ ಶರಣಿಯರು ಯುವಕರು ಸೇರಿದಂತೆ ಉತ್ಸವದಲ್ಲಿ ಪ್ರತಿಭಾವದೊಂದಿಗೆ ಭಾಗವಹಿಸಿ ದರ್ಶನ ಮತ್ತು ಆಶೀರ್ವಾದ ಪಡೆದರು.

Comments are closed.

Don`t copy text!