Shubhashaya News

ಭಾರತೀಯ ಖೇತ್ ಮಜ್ದೂರ್ ಯೂನಿಯನ್, ಕಿಸಾನ್ ಸಭಾ ಆಡಳಿತ ಸೌಧ ಮುಂದೆ ಪ್ರತಿಭಟನೆ

ರೈತರು ಮತ್ತು ಕೃಷಿ ಕಾರ್ಮಿಕರ ಹಕ್ಕುಗಳಿಗಾಗಿ ಮುಖ್ಯಮಂತ್ರಿಗಳಿಗೆ ಮನವಿ; ೪೩ ದಿನಗಳ ಧರಣಿ ಸತ್ಯಾಗ್ರಹದ ಬೇಡಿಕೆಗಳಿಗೆ ಒತ್ತಾಯ

ಆಳಂದ: ಪಟ್ಟಣದ ಪ್ರವಾಸಿ ಮಂದಿ ಮುಂದೆ ಕಿಸಾನಸಭಾ ಅನಿರ್ದಿಷ್ಟಾವಧಿ ಧರಣಿ ನಡೆವೆ ಆಡಳಿತಸೌಧ ಮುಂದೆ ಕಿಸಾನಸಭಾ ಪ್ರತಿಭಟನೆ ನಡೆಸಿ ತಹಸೀಲ್ದಾರ ಅಣ್ಣಾರಾವ್ ಪಾಟೀಲಗೆ ಮನವಿ ಸಲ್ಲಿಸಿದರು.

ಆಳಂದÀ: ಭಾರತೀಯ ಖೇತ್ ಮಜ್ದೂರ್ ಯೂನಿಯನ್ ಮತ್ತು ಕಿಸಾನ್ ಸಭಾ ಸಂಘಟನೆಗಳ ನೇತೃತ್ವದಲ್ಲಿ ಆಳಂದ ತಾಲೂಕು ಆಡಳಿತ ಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಪರವಾಗಿ ಹಮ್ಮಿಕೊಳ್ಳಲಾದ ನಿರಂತರ ಧರಣಿ ಸತ್ಯಾಗ್ರಹವು ಇಂದಿಗೆ ೪೩ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ತಹಶೀಲ್ದಾರ್ ಶ್ರೀ ಅಣ್ಣಾರಾವ್ ಪಾಟೀಲ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ತಮ್ಮ ಪ್ರಮುಖ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಕಿಸಾನ್ ಸಭಾ ಹಲವಾರು ರೈತ ಪರ ಬೇಡಿಕೆಗಳಿಗಾಗಿ ನಿರಂತರ ಧರಣಿ ನಡೆಸುತ್ತ ಬಂದಿದ್ದು, ಅದರ ಮಧ್ಯೆ ಇಂದು ತಾಲೂಕು ಕಚೇರಿ ಮುಂದೆ ಬಲವಾದ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಒತ್ತಾಯಿಸಲಾಯಿತು. ರೈತರು ಮತ್ತು ಕೃಷಿ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಖಾಸಗಿ ಲೇವಾದೇವಿ: ಕ್ಯಾನ್ಸರ್ ಮತ್ತು ಎಚ್.ಐ.ವಿ.ಗಿಂತಲೂ ಭೀಕರ ಸಾಮಾಜಿಕ ಸಮಸ್ಯೆಯಾಗಿ ಇಂದಿನ ಪ್ರತಿಭಟನೆಯ ೧೧ ಬೇಡಿಕೆಗಳ ಪೈಕಿ ಖಾಸಗಿ ಲೇವಾದೇವಿ ವಿಷಯವು ಅತ್ಯಂತ ಮಹತ್ವದ ಅಂಶವಾಗಿ ಮುನ್ನೆಲೆಗೆ ಬಂದಿದ್ದು, ಇದರ ಬಗ್ಗೆ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಯಿತು.
ಸಂಘಟನೆಯ ಮುಖಂಡರು ಮಾತನಾಡುತ್ತ, “ಖಾಸಗಿ ಲೇವಾದೇವಿ ವ್ಯವಹಾರಗಳು ಕ್ಯಾನ್ಸರ್ ಮತ್ತು ಎಚ್.ಐ.ವಿ.ಗಿಂತಲೂ ಹೆಚ್ಚು ಭೀಕರವಾದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಸೃಷ್ಟಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಳಂದ ತಾಲೂಕಿನಲ್ಲಿ ನೋಂದಾಯಿತ ಮತ್ತು ನೋಂದಾಯಿಸದ ಲೇವಾದೇವಿ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಲೇವಾದೇವಿ ಮಾಡುತ್ತಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು ಒತ್ತಾಯಿಸಿದರು. ಭೂರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಸ್ವಯಂ ಉದ್ಯೋಗ ಮತ್ತು ಆಶ್ರಯ ಒದಗಿಸುವಂತೆ ಆಗ್ರಹಿಸಿದರು.
ಭೂರಹಿತ ಕೃಷಿ ಕೂಲಿ ಕಾರ್ಮಿಕರು ಭೂರಹಿತ ನಿರುದ್ಯೋಗಿಗಳಾಗಿದ್ದು, ಅವರಿಗೆ ಸ್ವಯಂ ಉದ್ಯೋಗ ನಿರ್ಮಿಸಿಕೊಡಲು ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅದರಲ್ಲಿ ಮುಖ್ಯವಾಗಿ: ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಸರ್ಕಾರಿ ಬ್ಯಾಂಕ್‌ಗಳಿAದ ರಿಯಾಯಿತಿ ದರದಲ್ಲಿ ಆರ್ಥಿಕ ನೆರವು ನೀಡಬೇಕು. ಅಗತ್ಯ ಇರುವವರಿಗೆ ಸರ್ಕಾರಿ ಗ್ಯಾರಂಟಿ ಜಾಗದಲ್ಲಿ ನಿವೇಶನ ಮತ್ತು ಮನೆ ನಿರ್ಮಿಸಿ ಕೊಡಬೇಕು. ಕೃಷಿಗೆ ನೀರು ಮತ್ತು ಕುಡಿಯುವ ನೀರಿಗಾಗಿ ಅಂತರ್ ಅಂತರ್ಜಲ ಯೋಜನೆ ಅನುಷ್ಠಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷಿ ಮತ್ತು ಕುಡಿಯುವ ನೀರಿಗಾಗಿ ಹಣಮಂತರಾವ್ ಸಮಿತಿಯ ಮಾರ್ಗದರ್ಶನದ ಪ್ರಕಾರ ತಾಲೂಕಿನಾದ್ಯಂತ ಅಂತರ್ ಅಂತರ್ಜಲ ಸಂಪರ್ಕ ಯೋಜನೆ ಕೈಗೊಳ್ಳಬೇಕು. ಈ ಯೋಜನೆ ಅನುಷ್ಠಾನದಿಂದ ಕೃಷಿ ನೀರಾವರಿ, ಕುಡಿಯುವ ನೀರಿನ ಸಮಸ್ಯೆ ಮತ್ತು ನಿರುದ್ಯೋಗ ಮೂರು ಸಮಸ್ಯೆಗಳನ್ನು ಒಂದೇ ಬಾರಿ ನಿವಾರಿಸಲು ಸಾಧ್ಯ ಎಂದು ಮುಖಂಡರು ಜೊತೆಗೆ ಈ ಕಾಮಗಾರಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ತಾಲೂಕಾಧ್ಯಕ್ಷ ಧರ್ಮಣ್ಣ ಪೂಜಾರಿ, ಉಪಾಧ್ಯಕ್ಷ ಮಹಾದೇವ ಮಂಟಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾರಿ ಜೋಗೆ, ನ್ಯಾಯವಾದಿ ಪಂಡಿತ್ ಸಲ್ಗರ್, ಕಮಲೇಶ ಅವಟೆ, ಮಹಾದೇವ ಜಿಡ್ಡೆ, ಕಬೀರಾ ಬೇಗಂ, ರಮೇಶ ಹಾತ್ತಿಗಳೆ, ಅಶ್ರಫ್ ಮುಲ್ಲಾ, ಬಾಷಾ ಯಳಸಂಗಿ, ರತನಲಾಲ ಕಲಶೆಟ್ಟಿ, ಶರಣಗೌಡ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಈ ಕುರಿತು ಸಂಬAಧಿತ ಅಧಿಕಾರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸಲಾಗುವುದು ಸರ್ಕಾರ ಮಟ್ಟದ ಬೇಡಿಕೆಗೆ ಮೇಲಾಧಿಕಾರಿಗಳ ಮೂಲಕ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Comments are closed.

Don`t copy text!