ಆಳಂದ: ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದರೈತರ ಖಾತೆಗೆಬಿಲ್ ಪಾವತಿಸುವಂತೆ ಆಗ್ರಹಿಸಿ ಕರವೇ ಅಧ್ಯಕ್ಷ ಬಸವರಾಜ ಯಳಸಂಗಿ ಪ್ರಮುಖರು ನೇತೃತ್ವದಲ್ಲಿ ಕಾರ್ಖಾನೆ ಉಪಾಧ್ಯಕ್ಷರಿಗೆಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ತಾಲೂಕಿನ ಭೂಸನೂರ ಬಳಿ ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿ ಮಾಡದೇ ಹೋದಲ್ಲಿ ರೈತರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಿಂಬರಗಾ ಹೋಬಳಿ ಘಟಕದ ಅಧ್ಯಕ್ಷ ಬಸವರಾಜ ಯಳಸಂಗಿ ಎಚ್ಚರಿಸಿದರು.
ತಾಲೂಕಿನ ಭೂಸನೂರ ಬಳಿಯಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷರಿಗೆ ಲಿಖಿತವಾಗಿ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿರುವ ಅವರು ಕಬ್ಬು ಪೂರೈಕೆಮಾಡಿದ ರೈತರಿಗೆ ಬಿಲ್ ತಕ್ಷಣವೇ ಪಾವತಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ರೈತರಿಗೆ ಬಿಲ್ ಇದುವರೆಗೂ ಪಾವತಿ ಮಾಡದೆ ಇರುವುದು ರೈತರಿಗೆ ತೊಂದರೆ ಎದುರಾಗಿದೆ. ಕಾರ್ಖಾನೆಯಿಂದ ಕಬ್ಬಿನ್ ಬಿಲ್‌ಪಾವತಿಗೆ ವಿಳಂಬದಿAದಾಗಿ ರೈತರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸತೊಡಗಿದ್ದಾರೆ. ಕೃಷಿ ಚುಟುವಟಿಕೆಗಳಿಗೆ ಮುಂದುವರೆಸಲು ತೊಂದರೆ ಆಗಿದೆ. ತಕ್ಷಣವೇ ಕಬ್ಬಿನ ಬಿಲ್ ರೈತರ ಖಾತೆಗೆ ಪಾವತಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಕಾಖಾನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಸಿದರು.
ಕರವೇ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ, ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ನಿಂಬರಗಾ ಅಧ್ಯಕ್ಷ ಧರ್ಮರಾಯ ಎಸ್.ಕಾಮಣಗೊಳ ಸೇರಿದಂತೆ ಇತರರು ಉಪಸ್ಥಿತರಿದ್ದು ರೈತರ ಕಬ್ಬಿನ ಬಿಲ್ ತಕ್ಷಣಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಾರ್ಖಾನೆ ಉಪಾಧ್ಯಕ್ಷರು ಈಕುರಿತು ಬಿಲ್‌ಪಾವತಿಗೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
Comments are closed.