Shubhashaya News

ಸಿಯುಕೆ ಐಇಇಇಎಪಿ-ಎಂಐಟಿ,ಸ್ ವಿದ್ಯಾರ್ಥಿ ಘಟಕ ಉದ್ಘಾಟನೆ

ಆಳಂದ: ಸಿಯುಕೆಯಲ್ಲಿ ನಡೆದ ಎಇಇಇಎಪಿ ಮತ್ತು ಎಂಐಟಿ ವಿದ್ಯಾರ್ಥಿ ಘಟಕದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಇಟಲಿಯ ಎಂಐಟಿ,ಸ್ ಸೋಸೈಟಿ ಅಧ್ಯಕ್ಷ ಪ್ರೊ. ಮೌರಿಜಿಯೋ ಅವರನ್ನು ಮತ್ತು ಪ್ರೊ. ಚಿನ್ಮಯ ಸಾಹಾ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಗೌರವಿಸಿದರು.

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಜಿನಿಯರಿAಗ್ ವಿಭಾಗದ ಆಶ್ರಯದಲ್ಲಿ ಐಇಇಇಎಪಿ-ಎಸ್‌I ಮತ್ತು ಎಂಐಟಿ ವಿದ್ಯಾರ್ಥಿ ಘಟಕವನ್ನು ಭವ್ಯವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಮತ್ತು ಐಇಇಇ ೨೦೨೪ರ ಮೈಕ್ರೋವೇವ್ ಥಿಯರಿ ಅಂಡ್ ಟೆಕ್ನಾಲಜಿ ಸೊಸೈಟಿ (ಎಂಐಟಿ,ಸ್) ಅಧ್ಯಕ್ಷರಾದ ಪ್ರೊ. ಮೌರಿಜಿಯೋ ಬೊಜ್ಜಿ ಅವರು ಭಾಗವಹಿಸಿ ಮಾತನಾಡಿದರು. ೧೯೫೨ರಲ್ಲಿ ಸ್ಥಾಪಿತವಾದ Iಇಇಇ ಒಖಿಖಿ-S ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ೧೮,೦೦೦ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ೪೦೦ಕ್ಕೂ ಅಧಿಕ ಶಾಖೆಗಳೊಂದಿಗೆ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು. ಇಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ಹಾಗೂ ಸಂಶೋಧನಾ ಸಾಮರ್ಥ್ಯವನ್ನು ಬೆಳೆಸಲು ಅತ್ಯಂತ ಉಪಯುಕ್ತವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಐಇಇಇಎಂಟಿಟಿ,ಸ್ (ರೀಜಿನ್೧೦)ಮೇಘಾ ಉಪಾಧ್ಯಕ್ಷ ಹಾಗೂ ಭಾರತೀಯ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಚಿನ್ಮಯ ಸಾಹಾ ಅವರು ಮಾತನಾಡಿ, ಜೆಇಇಇ ಮೂಲಕ ದೊರೆಯುವ ವಿವಿಧ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, Iಇಇಇ ಒಖಿಖಿ-S ಘಟಕವು ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಗುರಿಗಳನ್ನು ಸಾಧಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರಿAಗ್ ವಿಭಾಗದ ಡೀನ್ ಪ್ರೊ. ಪರಮೇಶ್ ಅವರು ಸ್ವಾಗತ ಭಾಷಣ ಮಾಡಿದರು. ಸಲಹೆಗಾರರಾದ ಡಾ. ಎನ್.ಸಿ. ಪ್ರಧಾನ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಪ್ರೊ. ರಾಜೀವ್ ಜೋಶಿ ಸೇರಿದಂತೆ ವಿಭಾಗದ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.

Don`t copy text!