ದೆಹಲಿ ವಿರುದ್ಧದ ಪಂದ್ಯ ಗೆದ್ದರೇ ತೆಂಗಿನಕಾಯಿ ಹಾಗೂ ಉರುಳು ಸೇವೆ ಹರಕೆ ಹೊತ್ತಿದ್ದ ಅಭಿಮಾನಿ
ಅವನಿಗೆ ಕ್ರಿಕೇಟ್ ಆಡಲು ಬರುವುದಿಲ್ಲ ಕ್ರಿಕೇಟ್ ಪಂದ್ಯದಲ್ಲಿ ಒಂದು ತಂಡದಲ್ಲಿ ಎಷ್ಟು ಜನ ಆಟಗಾರರು ಇರ್ತಾರೆ ಎನ್ನುವುದೂ ಗೊತ್ತಿಲ್ಲ ಆದರೆ ಈ ಯುವಕನಿಗೆ ಆರ್ಸಿಬಿ ತಂಡ ಎಂದರೆ ಏನೋ ಅಭಿಮಾನ.
ಹೌದು ಈ ಯುವಕನ ಹೆಸರು ಆಕಾಶ ಕಟಕೆ. ಊರು ಖಜೂರಿ, ವಯಸ್ಸು 21, ಓದಿದ್ದು 5ನೇ ತರಗತಿ. ಸಧ್ಯ ಮಾಡುತ್ತಿರುವ ಕೆಲಸ ಕೂಲಿ. ಮಂಗಳವಾರ ನಡೆದ ದೆಹಲಿ ಮತ್ತು ಆರ್ಸಿಬಿ ಪಂದ್ಯ ರೋಚಕ ತಿರುವು ಪಡೆದಿತ್ತು ಕೊನೆ ಗಳಿಗೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎನ್ನುವುದು ಕೂತುಹಲ ಮೂಡಿಸಿತ್ತು. ಪಂದ್ಯವನ್ನು ಗೆಳೆಯರ ಜೊತೆ ವೀಕ್ಷಣೆ ಮಾಡುತ್ತಿದ್ದ ಆಕಾಶಗೆ ಎಲ್ಲರೂ ಆರ್ಸಿಬಿ ಸೋಲುತ್ತದೆ ಎಂದು ಮೊದಲಿಸಿದ್ದರು ಆದರೆ ಗೆಳೆಯರ ಜೊತೆ ವಾದ ಮಾಡಿ ಆರ್ಸಿಬಿ ಗೆದ್ದರೇ ಖಜೂರಿಯ ಆರಾಧ್ಯದೈವ ಕೋರಣ್ಣೇಶ್ವರರಿಗೆ ತೆಂಗಿನಕಾಯಿ ಒಡೆಯುತ್ತೇನೆ ಹಾಗೂ ಉರುಳು ಸೇವೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದ ಅದರಂತೆ ಪಂದ್ಯ ಅಂತ್ಯಗೊಂಡಾಗ ಆರ್ಸಿಬಿ ತಂಡ ರೋಚಕ 1 ರನ್Àನಿಂದ ಜಯದ ಮಾಲೆ ಮೂಡಿಗೇರಿಸಿಕೊಂಡಿತ್ತು.
ಹರಕೆಯಂತೆ ಇಂದು ಗೆಳೆಯರ ಜೊತೆ ದೇವಸ್ಥಾನಕ್ಕೆ ಹೋಗಿ ಉರುಳು ಸೇವೆ ಸಲ್ಲಿಸಿ, ತೆಂಗಿನ ಕಾಯಿ ಒಡೆದು ಈ ಸಲ್ ಕಪ್ ಆರ್ಸಿಬಿ ತಂಡಕ್ಕೆ ಸಿಗಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾನೆ. ಆಕಾಶ ಕ್ರಿಕೇಟ್ ಅಭಿಮಾನಕ್ಕೆ ಗ್ರಾಮಸ್ಥರು ಭೇಷ್ ಎನ್ನುತ್ತಿದ್ದಾರೆ.