ಆಳಂದ: ತಡಕಲ್ ಗ್ರಾಮದಲ್ಲಿ ನಸಿರವಾಡಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ಆಯೋಜಿಸಿದ್ದ ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನೀಲಿ ಸಿನಿಮಾ ಖಳನಾಯಕ ನಟ್ ಸಿದ್ಧರಾಮ ಚಿಮ್ಮನ ಉದ್ಘಾಟಿಸಿದರು. ಪತ್ರಕರ್ತ ಮಹಾದೇವ ವಡಗಾಂವ, ಗೋವಿಂದ ಮಂಡ್ಲೆ ಇತರರು ಇದ್ದರು.
ತಡಕಲ್ನಲ್ಲಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯಿAದ ಅದ್ದೂರಿ ಸಾಂಸ್ಕೃತಿಕ ಸಂಭ್ರಮ
ಆಳAದ: ನಸೀರವಾಡಿಯ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಆಯೋಜಿಸಲಾದ ಈ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ತಾಲೂಕಿನ ತಡಕಲ್ ಗ್ರಾಮವು ಈ ಸುಗಮ ಸಂಗೀತದ ನಾದದಲ್ಲಿ ತೇಲಿದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು.
ಶ್ರೀ ಮಲ್ಲಿಜಾರ್ಜುನ ದೇವಸ್ಥಾನದ ಪವಿತ್ರ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಗ್ರಾಮೀಣ ಕಲೆಯ ವೈಭವವನ್ನು ಮನಮುಟ್ಟುವ ರೀತಿಯಲ್ಲಿ ಮೂಡಿಬಂದಿತು.
ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖಳನಾಯಕ ನಟ ಸಿದ್ಧರಾಮ ಜಿ. ಚಿಮ್ಮನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಮಹಾದೇವ ವಡಗಾಂವ, ಗೋವಿಂದ ಮಂಡ್ಲೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮ ಜಿ. ಚಿಮ್ಮನ್ ಅವರು, “ಕಲೆ ಮತ್ತು ಕಲಾವಿದರನ್ನು ಗೌರವಿಸುವ ಪ್ರೇಕ್ಷಕರು ದೇವರ ಸ್ಥಾನದಲ್ಲಿದ್ದಾರೆ. ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಮಾತ್ರ ಉತ್ತಮ ಕಲಾ ಕೌಶಲ್ಯ ಬೆಳೆಯುತ್ತದೆ” ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಅವರು ಕರೆ ನೀಡಿದರು.
ಹಳ್ಳಿಸಲಗರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋವಿಂದ ಮಂಡ್ಲೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಯುವಜನತೆಗೆ ಸಕಾರಾತ್ಮಕ ದಾರಿಯನ್ನು ತೋರಿಸುತ್ತವೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು, ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯು ಹಳ್ಳಿಗಳಲ್ಲಿ ಕಲೆ ಉಳಿಸಿ ಬೆಳೆಸುವಲ್ಲಿ ಮಾಡುತ್ತಿರುವ ಸೇವೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾತೇರಾವ್ ಮಾಣಿಕ ಪಾಟೀಲ ವಹಿಸಿ ಮಾತನಾಡಿ, ಜನಪದ ಕಲೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ವೇದಿಕೆಯಲ್ಲಿ ರುದ್ರಪ್ಪ ಚಿಮ್ಮನ್, ಬಸವರಾಜ ಬಿರಾದಾರ, ಸಿದ್ರಾಮಪ್ಪ ಶಿವಶೆಟ್ಟಿ, ಫುಲಚಂದ ಮಂಡ್ಲೆ, ಅಣ್ಣಪ್ಪ ಚಿಮ್ಮನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂತ ಸುಶನಾಳ ಶರೀಫರ ಭಕ್ತಿಗೀತೆಗಳು ಪ್ರೇಕ್ಷಕರ ಮನ ಸೆಳೆದವು. ನಂತರ ನಡೆದ ವಿವಿಧ ಗಾಯನ ಕಾರ್ಯಕ್ರಮಗಳು ಗ್ರಾಮೀಣ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿತು.
ವಚನ ಗಾಯನದಲ್ಲಿ ಬಸವರಾಜ ಪೂಜಾರಿ ಬೆಳಮಗಿ, ಜಾನಪದ ಗೀತೆಯಲ್ಲಿ ಶಿವಶರಣಯ್ಯ ಸ್ವಾಮಿ, ತತ್ವಪದದಲ್ಲಿ ಗುರುಲಿಂಗಪ್ಪ ಬಿ. ಪೂಜಾರಿ, ಭಾವಗೀತೆಯಲ್ಲಿ ನಿಂಗಪ್ಪ ಪಾಂಚಾಳ, ಭಕ್ತಿಗೀತೆಯಲ್ಲಿ ಸಿದ್ಧರಾಮ ಎ. ಮಾಲಿಬಿರಾದಾರ, ದೇಶಭಕ್ತಿಗೀತೆಯಲ್ಲಿ ಶಿವಶರಣ ಪೂಜಾರಿ, ಕನ್ನಡ ಗೀತೆಗಳಲ್ಲಿ ನೀಲಮ್ಮ, ಸಾಂಪ್ರದಾಯಿಕ ಪದ್ಯಗಳಲ್ಲಿ ಶಿವಮ್ಮ ಎಂ. ಪಾಟೀಲ, ಕಥಾಕೀರ್ತನೆಯಲ್ಲಿ ಸುನೀಲ ಹೋಳಕುಂದಿ, ದಾಸವಾಣಿಯಲ್ಲಿ ಕವಿರಾಜ ಹೋಳಕುಂದಿ, ಶಾಸ್ತ್ರೀಯ ಸಂಗೀತದಲ್ಲಿ ಬಾಬುರಾವ್ ಪಾಟೀಲ, ಭಜನಾ ಪದದಲ್ಲಿ ಬಾಬು ಬೆಮೂಣಗೆ, ಸುಗಮ ಸಂಗೀತದಲ್ಲಿ ಮಹಾನಂದ ಎಸ್. ಯಂಕAಚಿ ಹಾಗೂ ಯುವ ಕಲಾವಿದರಾದ ಯಲ್ಲಾಲಿಂಗ ಟಿ. ಪಾಟೀಲ ಮತ್ತು ಅನುರೇಖಾ ಪಿ. ಯಂಪಾಳೆ ತಮ್ಮ ಅದ್ಭುತ ಕಲಾಪ್ರದರ್ಶನದಿಂದ ಜನಮನ ಗೆದ್ದರು.
ಸಂಗೀತ ಕಾರ್ಯಕ್ರಮಕ್ಕೆ ತಡಕಲ್ನ ಸೋಮಶೇಖರ ಆರ್. ಸ್ವಾಮಿ ಮತ್ತು ಚಿಂಚನಸೂರ ಶಿವಕುಮಾರ ಬಿ. ಹಲಕಟ್ಟಿ ಅವರು ತಬಲಾ ಸಹಕಾರ ನೀಡಿದರೆ, ನಸೀರವಾಡಿಯ ಅಭಿಮಾನ ಹಾರ್ಮೋನಿಯಂ ಸಾಥ ನೀಡಿದರು. ಅವರ ಸಂಗೀತ ಸಹಕಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.
Comments are closed.