Shubhashaya News

ಭೀಕರ ಅಪಘಾತ: ನಾಲ್ವರ ಸಾವು. ಅಪಘಾತ ಹೇಗಾಯಿತು?. ಯಾಕಾಯಿತು?. ಎಲ್ಲಾಯಿತು?.

ಬಳ್ಳಾರಿ : ಲಾಕ್ ಡೌನ್ ಭಯದಲ್ಲಿ ಊರಿಗೆ ಹೊರಟಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ನಡೆದಿದೆ.

ಲಾರಿ- ಕಾರು ಮುಖಾಮುಖಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ನಸುಕಿನ ಜಾವ 1.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಮೃತರು ಚಿಂಚೋಳಿ ತಾಲೂಕಿನ ಚಿಮ್ಮಾ ಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರು.

ಕೋವಿಡ್ ಕರ್ಫ್ಯೂ ಜಾರಿಯಿಂದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಬರುವಾಗ ಲಾರಿಗೆ ಕಾರ್ ಡಿಕ್ಕಿಯಾಗಿ ಈ ಅವಘಡ ನಡೆದಿದ್ದು,ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ (52),ಭೀಮರಾವ (30), ಸುನೀಲ ಶಿವರಾಜ ಪಾಟೀಲ‌(30), ಕಾರಿನ ಚಾಲಕ ರೇವಣಸಿದ್ದ (30 ) ಸಾವನ್ನಪ್ಪಿದ್ದಾರೆ.

ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave A Reply

Your email address will not be published.