Shubhashaya News

ತಂದೆ ಮುಖ್ಯಮಂತ್ರಿ ಆಗಿರುವವರೆಗೂ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ : ಯತೀಂದ್ರ ಸಿದ್ದರಾಮಯ್ಯ

ನನ್ನ ತಂದೆಯವರು ಮುಖ್ಯಮಂತ್ರಿ ಆಗಿ ಇರುವವರೆಗೂ ನಾನು ಯಾವುದೇ ಸಚಿವ ಸ್ಥಾ‌ನದ ಆಕಾಂಕ್ಷಿ ಅಲ್ಲ. ತಂದೆ ಮುಖ್ಯಮಂತ್ರಿ ಇದ್ದಾಗ ಸಚಿವ ಸ್ಥಾನ ಕೇಳುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಮಾತನಾಡಿದರು.

ಯತೀಂದ್ರ ಅವರನ್ನು ಮಂತ್ರಿಯಾಗಿ ನೋಡಬಹುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗಿಂತ ಅರ್ಹತೆ ಇರುವರಿಗೆ, ಅನುಭವ ಇರುವವರಿಗೆ ಮತ್ತು ಹಿರಿಯರಿಗೆ ಸಚಿವ ಸ್ಥಾನ ಅವಕಾಶ ಸಿಗಬೇಕು. ಅದೇ ರೀತಿ ಹೊಸ ಶಾಸಕರೂ ಸಚಿವ ಸ್ಥಾನ ಕೇಳಿದ್ದಾರೆ. ಯಾವುದೇ ಕ್ಯಾಬಿನೆಟ್​ನಲ್ಲಿ ಹೊಸಬರು, ಅನುಭವ ಇರುವವರು ಇರುತ್ತಾರೆ. ಈ ಬಾರಿಯೂ ಅದನ್ನು ಮಾಡುತ್ತಾರೆ ಎಂದರು.

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ, ಬಾಗಲಕೋಟೆ ಉಸ್ತುವಾರಿ ಕೊಟ್ಟಿದ್ದರು. ಎಲ್ಲಿಗೆ ಹೋದ್ರೂ ಒಳ್ಳೆಯ ವಾತಾವರಣ ಇತ್ತು. ಹೀಗಾಗಿ, ಬಾಗಲಕೋಟೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಇನ್ನು ದಾವಣಗೆರೆಯಲ್ಲೂ ಒಳ್ಳೆಯ ವರದಿ ಇದೆ. ಅಲ್ಲಿಯೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Leave A Reply

Your email address will not be published.