ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತನ್ನ ಸಂಯೋಜಿತ ಶಾಲೆಗಳಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, 6ನೇ ತರಗತಿಯಿಂದಲೇ ತೃತೀಯ ಭಾಷೆ (R3) ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸೂಚಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಭಾಷಾ ಕಲಿಕೆಗೆ ಬೇಕಾದ ಅಧಿಕೃತ ಪಠ್ಯಪುಸ್ತಕಗಳು ಇನ್ನೂ ಲಭ್ಯವಿಲ್ಲದಿದ್ದರೂ, ಕೇವಲ 7 ದಿನಗಳ ಒಳಗಾಗಿ ಬೋಧನೆ ಆರಂಭಿಸುವಂತೆ ಶಾಲೆಗಳಿಗೆ ಗಡುವು ನೀಡಲಾಗಿದೆ.
2026-27ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅಧಿಕೃತ ಪಠ್ಯಪುಸ್ತಕಗಳು ಬರುವವರೆಗೆ ಕಾಯದೆ, ಸ್ಥಳೀಯವಾಗಿ ಲಭ್ಯವಿರುವ ಪುಸ್ತಕ ಅಥವಾ ಸಾಮಗ್ರಿಗಳನ್ನು ಬಳಸಿಕೊಂಡು ಬೋಧನೆ ಆರಂಭಿಸಲು ಸೂಚಿಸಲಾಗಿದೆ.
ಸಿಬಿಎಸ್‌ಇ ನಿಯಮದಂತೆ ಒಟ್ಟು ಮೂರು ಭಾಷೆಗಳಿರಲಿದ್ದು (R1, R2, R3), ಇವುಗಳಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರಬೇಕು.ಈಗಾಗಲೇ ಹಲವು ಶಾಲೆಗಳು ಇದನ್ನು ಜಾರಿಗೆ ತಂದಿದ್ದು, ಬಾಕಿ ಇರುವ ಶಾಲೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯನ್ನು ಪ್ರಾದೇಶಿಕ ಕಚೇರಿಗಳು ಮೇಲ್ವಿಚಾರಣೆ ಮಾಡಲಿವೆ ಎಂದು ಮಂಡಳಿ ಎಚ್ಚರಿಸಿದೆ.
Comments are closed.