Shubhashaya News

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

ಇಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೀಗ ಆತನ ವಿರುದ್ಧ ಶಿಕ್ಷಕಿ ಲವ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ, ಶಿಕ್ಷಕಿಗೆ ಇಂಜಿನಿಯರ್ ವಂಚಿಸಿದ ಆರೋಪ ಬೆಳಕಿಗೆ ಬಂದಿದೆ. ಸದ್ಯ ಇಂಜಿನಿಯರ್ ವಿರುದ್ಧ ಶಿಕ್ಷಕಿ ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರೀತಿ ಪ್ರೇಮ ಅಂತ ಇಬ್ಬರು 7-8 ವರ್ಷಗಳ ಕಾಲ ಓಡಾಡಿದ್ದಾರೆ. ಕಾಲೇಜಿನಗಳಿಂದ ಯುವತಿ ಮತ್ತು ಮಲ್ಲಿಕಾರ್ಜುನ ನಡುವೆ ಲವ್ ಇತ್ತು. ಮಂತ್ರಾಲಯ ಆಲಮಟ್ಟಿ ಡ್ಯಾಮ್ ಸೇರಿ ವಿವಿಧೆಡೆ ಇಬ್ಬರು ಸುತ್ತಾಡಿದ್ದಾರೆ. ಈ ವೇಳೆ ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಇಂಜಿನಿಯರ್ ಮಲ್ಲಿಕಾರ್ಜುನ ವಿರುದ್ಧ ಶಿಕ್ಷಕಿ ದೂರು ಸಲ್ಲಿಸಿದ್ದಾರೆ.

ಫೋಟೋಗಳು, ಆಡಿಯೋ ವಿಡಿಯೋ ಮತ್ತು ಮೆಸೇಜುಗಳ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ರಾಯಚೂರಿನ ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.. ಕಳೆದ 7ರಿಂದ 8 ವರ್ಷಗಳಿಂದ ಸಂಬಂಧ ಹೊಂದಿರುವ ಬಗ್ಗೆ ದೂರು ಬಂದಿದೆ. ಶಿಕ್ಷಕಿ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ದೂರಿನ ಸಂಬಂಧ ರಾಯಚೂರು ಎಸ್ ಪಿ ಪ್ರತಿಕ್ರಿಯೆ ನೀಡಿದರು

Comments are closed.

Don`t copy text!