Shubhashaya News

ಬೆಳಮಗಿಯಲ್ಲಿ ಧರ್ಮಸ್ಥಳ ಯೋಜನೆಯಿಂದ ತಿಪ್ಪವ್ವ ಪೂಜಾರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಆಳಂದ: ಬೆಳಮಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಡಿ ತಿಪ್ಪವ್ವ ಪೂಜಾರಿ ಅವರಿಗೆ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಲಾಯಿತು.

ಆಳಂದ: ಬೆಳಮಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ತಡಕಲ್ ವಲಯದ ಬೆಳಮಗಿ ಗ್ರಾಮದ ವಾತ್ಸಲ್ಯ ಸದಸ್ಯೆ ತಿಪ್ಪವ್ವ ಪೂಜಾರಿ ಅವರಿಗೆ ನಿರ್ಮಿಸಲಾದ ‘ವಾತ್ಸಲ್ಯ ಮನೆ’ಯನ್ನು ಇಂದು ಸಂಸ್ಥೆಯ ಅಧಿಕಾರಿಗಳಿಂದ ಹಸ್ತಾಂತರಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಿದರು. ಶುಗರ್ ಪ್ಯಾಕ್ಟರಿ ಉಪಾಧ್ಯಕ್ಷ Àುಭಾμï ಮುರುಡ್, ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಚೌಹಾನ್ ಸೇರಿ ಸದಸ್ಯರು, ಜನಜಾಗೃತಿ ವೇದಿಕೆ ಸದಸ್ಯ ರಾಜಕುಮಾರ ಶೇಟಗಾರ್, ವಲಯದ ಮೇಲ್ವಿಚಾರಕ ಸಂಗಮೇಶ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಣುಕಾ, ಸೇವಾ ಪ್ರತಿನಿಧಿ ಸವಿತಾ, ಸಂಘದ ಸದಸ್ಯರು, ಬೀರಲಿಂಗೇಶ್ವರ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಹಿರಿಯ ನಾಗರಿಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರು, ಅಸಹಾಯಕರು ಮತ್ತು ಬಡವರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸುವುದು ನಿರಂತರವಾಗಿ ನಡೆಯುತ್ತಿದ್ದು, ಇದು ಸಮಾಜದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದಿದೆ ಎಂದು ತಾಲೂಕು ಅಧಿಕಾರಿ ಕೃಷ್ಣಪ್ಪ ಬೆಳವಣಕಿ ಅವರು ಹೇಳಿದರು.

Comments are closed.

Don`t copy text!