Shubhashaya News

ಎಸ್‍ಆರ್‍ಜಿ ಮೆಗಾ ಕಾರ್ನಿವಲ್ ಫೆ. 13ರಂದು

ಆಳಂದ: ಪಟ್ಟಣದ ಪ್ರತಿಷ್ಠಿತ ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಫೆ.13 ರ ಶುಕ್ರವಾರದಂದು ಎಸ್‍ಆರ್‍ಜಿ ಮೆಗಾ ಕಾರ್ನಿವಲ್ ಹಮ್ಮಿಕೊಳ್ಳಲಾಗಿದೆ.

ಮೇಗಾ ಕಾರ್ನಿವಲ್‍ನಲ್ಲಿ 6 ವಿಭಾಗಗಳು ಇರಲಿದ್ದು ವಿಜ್ಞಾನ ವಸ್ತು ಪ್ರದರ್ಶನ, ಫ್ಯಾನ್ಸಿ ಡ್ರೇಸ್, ಗೇಮ್ ಝೋನ್, ಆಹಾರ ಮಳಿಗೆ, ಕಲಾ ಪ್ರದರ್ಶನ, ಮನರಂಜನಿ ಪ್ರದರ್ಶನಗಳು ಮೆಗಾ ಕಾರ್ನಿವಲ್‍ನ ಪ್ರಮುಖ ಆಕರ್ಷಣೆಗಳಾಗಿವೆ. ಕಾರ್ನಿವಲ್‍ಗಾಗಿ 1200 ವಿದ್ಯಾರ್ಥಿಗಳು, 100ಕ್ಕೂ ಅಧಿಕ ಸಿಬ್ಬಂದಿಗಳು ಶ್ರಮ ಹಾಕಿದ್ದಾರೆ.

ಅಂದು ಮಧ್ಯಾಹ್ನ 12 ಗಂಟೆಗೆ ಶಾಲೆಯ ಆವರಣದಲ್ಲಿ ಜರುಗುವ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಣಿ ಎಸ್ ಅಪ್ಪ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಕಲಬುರಗಿ ವಿಭಾಗದ ಸಹಾಯಕ ಆಯುಕ್ತೆ ಕು. ಸಾಹಿತ್ಯ ಆಲದಕಟ್ಟಿ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈದರಬಾದನ್ ಪ್ರಸಿದ್ಧ ಶ್ವಾಸರೋಗ ತಜ್ಞೆ ಜ್ಯೋತ್ಸ್ನಾ ಅಸ್ಥಾನಾ, ಡಿಡಿಪಿಐ ಶಂಕ್ರಮ್ಮ ಢವಳಗಿ, ಕ್ಷೇತ್ರ ಶಿಕ್ಷಾಣಾಧಿಕಾರಿ ವಿ ರಂಗಸ್ವಾಮಿ ಶೆಟ್ಟಿ, ಮಾಜಿ ಶಾಸಕ, ಸಂಸ್ಥೆಯ ಅಧ್ಯಕ್ಷ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಉಪಾಧ್ಯಕ್ಷ ಸಂತೋಷ ಗುತ್ತೇದಾರ, ಕಾರ್ಯದರ್ಶಿ ಹರ್ಷಾ ಗುತ್ತೇದಾರ, ಆಡಳಿತಾಧಿಕಾರಿ ಹಣಮಂತ ಶೇರಿ ಭಾಗವಹಿಸಲಿದ್ದಾರೆ.

ಸಾಯಂಕಾಲ ಜರುಗುವ ಸಾಧಕರ ಸಂಜೆ ಕಾರ್ಯಕ್ರಮದಲ್ಲಿ ಎಸ್‍ಆರ್‍ಜೆ ಅಬ್ಯಾಕಸ್ ಫೌಂಡೇಶನ್‍ನ ಸಂಸ್ಥಾಪಕಿ ಸುಪ್ರಿಯಾ ಜೋಶಿ, ಫ್ಯೂಜನ್ ನೀಟ್ ಅಕಾಡೆಮಿಯ ನಿರ್ದೇಶಕ ಮಹೇಶ ಕೆ ಎಸ್, ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರಾದ ಕಲ್ಯಾಣಿ ಸಾವಳಗಿ, ಡಾ. ಅಶೋಕರೆಡ್ಡಿ, ಡಾ. ಅಪ್ಪಾಸಾಬ ಬಿರಾದಾರ, ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ರಾಜೇಂದ್ರ ಭಾವಿ, ಸಂತೋಷ ಕುಲಕರ್ಣಿ, ಸಿದ್ದಾರಾಮ ಧೋತ್ರೆ, ರಾಜಕುಮಾರ ಚಿಚಕೋಟೆ, ಶರಣಬಸಪ್ಪ ಶಿರೂರೆ, ಐಶ್ವರ್ಯಾ ದುರ್ಗೆ ಪಾಲ್ಗೊಳ್ಳಲಿದ್ದಾರೆ ಎಂದು ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.

Don`t copy text!