ಆಳಂದ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರದಲ್ಲಿ ನಡೆದ ಘಟನೆಯನ್ನು ಪಟ್ಟಣದಲ್ಲಿ ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ ಮಾತನಾಡಿ ಖಂಡಿಸಿದ್ದರು. ತಾಲೂಕು ಅಧ್ಯಕ್ಷ ಭೋಜರಾಜ ಜುಬ್ರೆ ಇತರರು ಇದ್ದರು.
ಆಳಂದ: ಧರ್ಮದ ಹೆಸರಿನಲ್ಲಿ ಇತರರನ್ನು ಕೊಂದವರು ಜಿಹಾದಿಗಳೆಂದರೆ, ಜಾತಿಯ ಕಾರಣಕ್ಕೆ ಮಗಳನ್ನೇ ಕೊಲ್ಲುವವರು ಯಾರು? ಮನುಷ್ಯತ್ವವಿಲ್ಲದ ಮೃಗಗಳನ್ನು ಸೃಷ್ಟಿಸುವ ಧರ್ಮ-ದೇವರರ ಸಂಖ್ಯೆ ಎಷ್ಟು? ಇಂತಹ ಪ್ರಶ್ನೆಗಳೊಂದಿಗೆ ಧ್ವನಿ ಎತ್ತಿರುವ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ ಮರ್ಯಾದೆಗೇಡು ಹತ್ಯೆಗಳು ಸಂಭವಿಸದಂತೆ ಕಠಿಣ ಕಾನೂನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸುವಂತೆಯೂ ಆಗ್ರಹಿಸಿದ ಅವರು, ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದ ದಲಿತ ಯುವಕ ವಿವೇಕಾನಂದ ಲಿಂಗಾಯತ ಜಾತಿಯ ಹುಡುಗಿ ಮಾನ್ಯಕಾ ಅವರೊಂದಿಗೆ ಜಾತಿಬಾಹ್ಯ ಮದುವೆಯನ್ನು ಮಾಡಿಕೊಂಡಿದ್ದ ಕಾರಣದಿಂದಾಗಿ, ಹುಡುಗಿಯ ತಂದೆ ಪ್ರಕಾಶ್ ಅವರು ಗರ್ಭಿಣಿ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ. ಈ ಘಟನೆಯು ಸಮಾಜದಲ್ಲಿ ಜಾತಿ ಆಧಾರಿತ ಹಿಂಸೆಯ ಭೀತಿಯನ್ನು ಬಹಿರಂಗಪಡಿಸಿದ್ದು, ದಲಿತ ಸೇನೆಯವರು ಇದನ್ನು “ಅಮಾನವೀಯ ಕೃತ್ಯ” ಖಂಡಿಸಲಿದೆ ಎಂದರು.
“ಜಾತಿ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಹತ್ಯೆ-ದಾಳಿಗಳನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಸಮಾಜಘಾತಕ ಶಕ್ತಿಗಳನ್ನು ಹಿಮ್ಮೆಟ್ಟಲು ಪರಿಶಿಷ್ಟರ ಜಾತಿ/ಪಂಗಡ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಿ, ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಿ” ಎಂದು ಸಂಘಟನೆಯ ಗೌರವಾಧ್ಯಕ್ಷ ಆನಂದರಾಯ ಗಾಯಕವಾಡ ಅವರು ಹೇಳಿದರು.
ಸಂಘಟನೆಯ ತಾಲೂಕ ಭೋಜರಾಜ್ ಜುಭ್ರೆ ಅವರು, ಬಸವಣ್ಣರ ಸಮಾನತೆಯ ಸಂದೇಶವನ್ನು ಉಲ್ಲೇಖಿಸಿದ ಅವರು. “ಬಸವಣ್ಣನವರು ಅಂತರ್ಜಾತಿ ಮದುವೆಗಳಿಗೆ ಮುನ್ನುಡಿ ಬರೆದು, ವಧು-ವರಸರ ಮಕ್ಕಳನ್ನು ಮದುವೆಯಾಗಿಸಿದರು. ಆದರೆ ಸಮಾಜಘಾತಕ ವರ್ಗಗಳು ಅವರ ಕಣ್ಣುಗಳನ್ನು ಕಿತ್ತಿ, ಆನೆ ಕಾಲಿಗೆ ಕಟ್ಟಿ ಎಳೆದು ಅಟ್ಟಹಾಸ ಮೆರೆದರು. ಇಂದು ಚಾತುರ್ವರ್ಣ ವ್ಯವಸ್ಥೆಯ ಕಡೆಗೆ ಲಿಂಗಾಯತ ಸಮುದಾಯವನ್ನು ಎಳೆಯುತ್ತಿರುವ ಈ ಶಕ್ತಿಗಳು ನೋವಿನ ಸಂಗತಿಯಾಗಿವೆ” ಎಂದು ಅವರು ಆಕ್ಷೇಪಿಸಿದರು.
ಜಯಕಾಂತ್ ವಾಘಮೋರೆ, ಬಸವರಾಜ್ ಕಾಂಬಳೆ, ದತ್ತಾ ಕೋಚಿ, ದೇವೀಂದ್ರ ಹಂಗರಗಿ, ಲಕ್ಷ್ಮಣ ಕೊಂಡಲಹಂಗರಗಿ, ದೀಪಕ್ ಬಂಡಾರೆ, ರಾಜಕುಮಾರ್ ಸಿಂಗೆ, ಶರಣು ಜಿಡಗಾ, ಪ್ರವೀಣ್ ಕಾಂಬಳೆ, ಬಾಳಪ್ಪ ತಳೇಕರ್, ಮಾಹಂತೇಶ ಬನ್ನಿಗಿಡ ಮತ್ತು ರವಿ ಮೇಲಿನಕೇರಿ ಅವರಂತಹ ಪದಾಧಿಕಾರಿಗಳು ಭಾಗವಹಿಸಿ ಘಟನೆಯನ್ನು ಖಂಡಿಸಿದ್ದಾರೆ.
Comments are closed.