ಚಿತ್ತಾಪುರ: ಪಟ್ಟಣದಲ್ಲಿ ಕೊರೊನಾ ಎರಡನೇ ಅಲೆಯ ವಿಕೇಂಡ್ ಕಪ್ರ್ಯೂನಿಂದಾಗಿ ಅಂಗಡಿ ಮುಂಗ್ಗಟ್ಟು ಬಂದ್ ಆಗಿರುವುದರಿಂದ ರಸ್ತೆಗಳು ಬೀಕೋ ಎನ್ನುತ್ತಿದ್ದವು.
ಚಿತ್ತಾಪುರ: ಕೊರೊನಾ ವೈರಸ್ನ ಎರಡನೇ ಅಲೆಯ ವಿಕೇಂಡ್ ಕಫ್ರ್ಯೂಗೆ ತಾಲೂಕು ಸಂಪೂರ್ಣ ಸ್ತಬ್ಧವಾಗಿದ್ದು, ಜನರು ಉತ್ತಮ ಪ್ರಕ್ರೀಯೆ ನೀಡಿದ್ದಾರೆ.
ಪಟ್ಟಣದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಿಲಾಗಿತ್ತು. ನಂತರ ಪಟ್ಟಣದ ಚಿತ್ತಾವಲಿ ಚೌಕ್, ಜನತಾ ಚ್ಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ಚೌಕ್, ಸ್ಟೇಷನ್ ಪ್ರದೇಶ, ರೈಲು ನಿಲ್ದಾಣ, ನಾಗಾವಿ ಚೌಕ್ ಮುಖ್ಯ ರಸ್ತೆಗಳಲ್ಲಿ ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಮಾಡಿ ವ್ಯಾಪಾರಸ್ಥರು ತಾಲೂಕು ಆಡಳಿತಕ್ಕೆ ಸಾಥ ನೀಡಿದರು. ಮೇಡಿಕಲ್, ಆಸ್ಪತ್ರೆ, ಪೆಟ್ರೋಲ್ ಬಂಕ್ ಮಾತ್ರ ತೆರೆದಿದ್ದವು.
ಕೆಲ ರಸ್ತೆಗಳ ಮೇಲೆ ಜನರ ಓಡಾಟ ಯಥಾಸ್ಥಿತಿಯಲ್ಲತ್ತು. ಬೈಕ್, ಲಾರಿ, ಕಾರ್, ಬಸ್, ಕ್ರಷರ್, ಆಟೋಗಳಿಗೆ ಯಾವುದೇ ರೀತಿಯ ನಿರ್ಬಂಧ ಕಾಣದೇ ಸಂಚಾರ ಯಥಾಸ್ಥಿತಿಯಲ್ಲಿತ್ತು. ಪಟ್ಣಣದ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆರೋಗ್ಯ ಇಲಾಖೆಯಿಂದ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತಿದೆ.
ತಹಶೀಲ್ದಾರ್ ಉಮಾಕಾಂತ ಹಳ್ಳೆ, ಪಿಎಸ್ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದರು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಕೊರೊನಾ ಎರಡನೇ ಅಲೆಯ ವಿಕೇಂಡ್ ಕಫ್ರ್ಯೂ ಶಾಂತವಾಗಿತ್ತು.