Shubhashaya News

ಕೋಲಿ ಸಮಾಜದ ಅಧ್ಯಕ್ಷ, ಯುವ ಅಧ್ಯಕ್ಷರ ಆಯ್ಕೆ

ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೋಲಿ ಸಮಾಜದ ಗೌರವಾಧ್ಯಕ್ಷ ಹಣಮಂತ ಸಂಕನೂರ, ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್, ಯುವ ಅಧ್ಯಕ್ಷ ಗುಂಡು ಐನಾಪುರ ಅವರನ್ನು ಕೋಲಿ ಸಮಾಜದ ಮುಖಂಡರು ಸನ್ಮಾನಿಸಿದರು.

ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ರಾಮಲಿಂಗ ಬಾನಾರ್ ಹೊಸ್ಸುರ್ ಹಾಗೂ ಯುವ ಅಧ್ಯಕ್ಷರನ್ನಾಗಿ ಗುಂಡು ಐನಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗೌರವಾಧ್ಯಕ್ಷ ಹಣಮಂತ ಸಂಕನೂರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ, ಎನ್‍ಈಕೆಆರ್‍ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ ನೇತೃತ್ವದಲ್ಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್ ಮಾತನಾಡಿ, ತಾಲೂಕಿನಲ್ಲಿ ಕೋಲಿ ಸಮಾಜದ ದೊಡ್ಡದಿದೆ. ಸಮಾಜದ ಸಂಘಟನೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಸಮಾಜದ ಸಂಘಟನೆಯಲ್ಲಿ ನಿಷ್ಪಕ್ಷಪಾತವಾಗಿ, ನಿಸ್ವಾರ್ಥ ಭಾವನೆಯಿಂದ ಕೆಲಸ ಮಾಡಬೇಕು. ಸಂಘಟನೆಯ ಜವಾಬ್ದಾರಿ ವಹಿಸಿಕೊಂಡವರಿಗೆ ಎಲ್ಲರೂ ಸಹಾಯ, ಸಹಕಾರ ನೀಡಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ರಾಮಲಿಂಗ ಬಾನಾರ್ ಮಾತನಾಡಿ, ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ಬಾರದಂತೆ ಸಮಾಜದ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಬಸವರಾಜ ಚಿಮ್ಮನಳ್ಳಿ, ನೂತನ ಯುವ ಅಧ್ಯಕ್ಷ ಗುಂಡು ಐನಾಪುರ, ದೇವಿಂದ್ರ ಅಣಕಲ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮು ಹೋತಿನಮಡಿ, ತಮ್ಮಣ್ಣ ಡಿಗ್ಗಿ, ನಿಂಗಣ್ಣ ಹೇಗಲೇರಿ, ಕಾಶಪ್ಪ ಡೋಣಗಾಂವ, ವಿಶ್ವನಾಥ ಸಾಲಿ, ದಶರಥ ದೊಡ್ಮನಿ, ಚಂದ್ರು ಕಾಳಗಿ, ಮಲ್ಲಿಕಾರ್ಜುನ ಸಂಗಾವಿ, ಸೋಮು ಐನಾಪುರ ಇದ್ದರು.

Leave A Reply

Your email address will not be published.