Shubhashaya News

ಸಾರಿಗೆ ನೌಕರರಿಗೆ ಸರ್ಕಾರ ರಕ್ಷಿಸಬೇಕು : ಭಗವಂತ ಖೂಬಾ

ರಾಜ್ಯದ ದರಿದ್ರ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಕೊಡದೆ. ಸರಿಯಾಗಿ ಬಸ್ಸುಗಳ ನಿರ್ವಹಣೆಯು ಮಾಡದೆ, ಬಸ್ ಚಾಲಕರಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ, ಸರ್ಕಾರ ಸಾರಿಗೆ ನೌಕರರ ರಕ್ಷಣೆಗೆ ನಿಲ್ಲುವುದು ಬಿಟ್ಟು, ಅವರ ಜೀವನದ ಜೊತೆ ಆಟವಾಡುವುದು ನಿಲ್ಲಿಸಬೇಕೆಂದು ಮಾಜಿಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.

ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದಕಲ್ಯಾಣಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ನಿನ್ನೆ ತಡರಾತ್ರಿ ಆಂದ್ರಪ್ರದೇಶದ ಕರ್ನುಲ್ ಬಳಿ ಬ್ರೇಕ್ ಫೇಲ್ ಆಗಿ ಅವಘಡಕ್ಕೆ ತುತ್ತಾಗಿದೆ, ದೇವರ ದಯೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲಾ,ಇನ್ನುಅರ್ಧ ಕೀ.ಮೀ ಬಸ್ಸು ಮುಂದೆ ಸಾಗಿ, ಘಟನೆ ನಡೆದಿದ್ದರೆ, ಬಸ್ಸು ಕೃμÁ್ಣ ನದಿಯಲ್ಲಿ ಹೋಗುವ ಸಂಭವ ಇತ್ತು ಎಂದು ಪ್ರಯಾಣಿಕರೊಬ್ಬರು ನನಗೆ ದೂರವಾಣಿ ಮೂಲಕ ತಿಳಿಸಿ, ದೇವರಿಗೆ ಧನ್ಯವಾದಗಳು ತಿಳಿಸಿದ್ದಾರೆ ಎಂದು ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.

ಬಸ್ಸುಗಳಿಗೆ ಸಮಯಕ್ಕೆ ಸರಿಯಾಗಿ ವಾಹನಗಳ ಬಿಡಿ ಭಾಗಗಳ ಪೂರೈಕೆ ಆಗುತ್ತಿಲ್ಲ ಮತ್ತು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಬ್ರೇಕ್ ಫೇಲ್ಗಳು ಆಗುತ್ತಿವೆ,ಇಂತಹ ಎಲ್ಲಾ ಸಂಕಷ್ಟಗಳು ಎದುರಿಸಿ, ನಮ್ಮ ಚಾಲಕರು, ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ, ನಮ್ಮನ್ನು ದೇವರೆಕಾಪಾಡಬೇಕೆಂದು ಎಂದು ಹಿರಿಯಚಾಲರೊಬ್ಬರೂ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಭಗವಂತ ಖೂಬಾ ತಿಳಿಸಿದ್ದಾರೆ.

ಒಂದೇಡೆ ಗ್ಯಾರಂಟಿ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಕೊಡ್ತಿದ್ದಾರೆ ಆದರೆ ಅದೇ ಬಸ್ಸುಗಳಿಗೆ ನಿರ್ವಹಣೆ ಮಾಡದೆ ಜನರ ಜೀವವು ಸಂಕಷ್ಟಕ್ಕೆ ದುಡುತ್ತಿದ್ದಾರೆ, ಇದು ಎಂತಹ ಗ್ಯಾರಂಟಿ ಎಂದು ಖೂಬಾ ಆಕ್ರೋಷ ವ್ಯಕ್ತಪಡಿಸಿದ್ದಾರೆ, ಗ್ಯಾರಂಟಿ ಗುಂಗಿನಲ್ಲಿ ಸರ್ಕಾರ ಜನರ ಜೀವದ ಜೊತೆ ಮತ್ತು ಸಾರಿಗೆ ನೌಕರರ ಜೀವನದ ಜೊತೆ ಆಟವಾಡುತ್ತಿರುವುದು ಸರಿಯಲ್ಲಾ,ಕೂಡಲೇ ಸರ್ಕಾರ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕೆಂದು ಭಗವಂತ ಖೂಬಾ ಅಗ್ರಹಿಸಿದ್ದಾರೆ.

               

ಬೀದರ ಬಸ್ ಡಿಪೋದಲ್ಲಿ ರಾಜಪ್ಪಎನ್ನುವ ಬಸ್ ಚಾಲಕರೊಬ್ಬರು ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಸ್ನಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ, ಸಾರಿಗೆ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಯಾವ ತರಹ ಕೆಲಸ ಮಾಡುತ್ತಿದ್ದಾರೆ, ವ್ಯವಸ್ಥೆ ನೌಕರರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಆತ್ಮಹತ್ಯೆಯಿಂದ ತಿಳಿದು ಬರುತ್ತಿದೆ, ಕೂಡಲೆ ಸರ್ಕಾರ ಮೃತರ ಕುಟುಂಬಕ್ಕೆ ಹೆಚ್ಚುವರಿಯಾಗಿ 25 ಲಕ್ಷ ಪರಿಹಾರ ಕೊಡಬೇಕು ಮತ್ತುಅವರ ಕುಟುಂಬ ಸದಸ್ಯರಿಗೆ ಉದ್ಯೋಗ ಕೊಟ್ಟು, ಆತ್ಮಹತ್ಯೆಯ ಕುರಿತು ತನಿಖೆ ನಡೆಸಿ, ಇದಕ್ಕೆ ಕಾರಣರಾದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾಜಿಕೇಂದ್ರ ಸಚಿವ ಭಗವಂತ ಖೂಬಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Comments are closed.

Don`t copy text!