ಆಳಂದ: ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಶ್ರಾವಣ ಸಂಜೆ ಸಮಾರೋಪದಲ್ಲಿ ಶಾಸಕ ಬಿ.ಆರ್. ಪಾಟೀಲ, ಶ್ರೀ ಅಭಿನವ ಶಿವಲಿಂಗ ಶ್ರೀ, ಅಪ್ಪಾರಾವ್ ಅಕ್ಕೋಣಿ, ಬಾಬುರಾವ್ ಮಡ್ಡೆ ಪ್ರಮುಖರನ್ನು ಸನ್ಮಾನಿಸಿದರು.
ಆಳಂದ: ಸಮಾನತೆ ಹಾಗೂ ಜಾತ್ಯತೀತ ವಿಚಾರಧಾರೆಗಳನ್ನು ಭೇದಾಭಿಪ್ರಾಯಗಳು ಕಡಿಮೆಯಾಗಲು ಶರಣರ ತತ್ವಗಳನ್ನು ಅನುಸರಿಸುವುದು ಅವಶ್ಯಕ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಅವರು ಅವರು ಕರೆ ನೀಡಿದರು.
ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಶ್ರಾವಣ ಸಂಜೆ 13ನೇ ವರ್ಷದ ಉಪನ್ಯಾಸ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಾದಿ ಶರಣರ ವಚನಗಳಲ್ಲಿನ ಅಂಶಗಳು ಭಾರತ ಸಂವಿಧಾನದಲ್ಲಿ ಅಡಗಿವೆ, ಇಂಥ ವೈಚಾರಿಕ ಮೌಲ್ಯಗಳು ಶಾಲೆ, ಕಾಲೇಜುಗಳ ಮಕ್ಕಳಲ್ಲಿ ಮನವರಿಕೆ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶರಣ ತತ್ವದೊಂದಿಗೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರವನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶರಣ ತತ್ವದ ಆಳವಾದ ಅಂಶಗಳನ್ನು ವಿವರಿಸಿದರು. ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಶ್ರಾವಣ ಸಂಜೆ ಕಾರ್ಯಕ್ರಮಗಳು ಯುವಜನರಿಗೆ ಶ್ರದ್ಧಾ, ಶೀಲ ಮತ್ತು ಸತ್ಯ ಜೀವನದ ಸಂದೇಶ ನೀಡುತ್ತವೆ ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಶಾಖೆ ಆಯುಕ್ತ ಡಾ. ಬಿ. ಶರಣಪ್ಪ, ಅಧ್ಯಕ್ಷತೆ ವಹಿಸಿದ್ದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಸಂಜಯ ಎಸ್. ಪಾಟೀಲ, ಮಾಜಿ ಅಧ್ಯಕ್ಷ ರಮೇಶ ಮಾಡಿಯಾಳಕರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮುಖಂಡ ಬಾಬುರಾವ್ ಮಡ್ಡೆ, ರೇವಣಸಿದ್ಧಪ್ಪ ನಾಗೂರೆ, ಜಿಪಂ ಮಾಜಿ ಸದಸ್ಯ ಗುರುಶಾಂತ ಪಾಟೀಲ, ಸಿದ್ಧರಾಮ ನಂದಗಾಂವ, ಮಲ್ಲಿನಾಥ ಯಲಶೆಟ್ಟಿ, ಕಲಾವಿದ ಶಿವಶರಣಪ್ಪ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಶರಣಪ್ಪ ಘಂಟೆ, ಶ್ರೀಶೈಲ ಪಾಟೀಲ, ಕಲ್ಯಾಣಪ್ಪ ಬಿಜ್ಜರಗಿ, ಮಲ್ಲಪ್ಪ ಹತ್ತರಕಿ, ನ್ಯಾಯವಾದಿ ದೇವಾನಂದ ಹೊದಲೂರಕರ್, ಶರಣಯ್ಯಾ ಸ್ವಾಮಿ ಖಂಡಾಳ, ಮಹೇಶ ಪಾಟೀಲ ಹೊಸಳ್ಳಿ, ಸಿಪಿಐಎಂನ ಸಲ್ಮಾನಖಾನ್, ಮಲ್ಲಿನಾಥ ವಚ್ಛೆ, ಎಲ್.ಎಸ್. ಬೀದಿ ಸೇರಿದಂತೆ ಶರಣ, ಶರಣಿಯರು ಮಕ್ಕಳು ಪಾಲ್ಗೊಂಡಿದ್ದರು.
ಆಯೋಜಿಸಿದ್ದ ವಚನ ಗಾಯನ, ವಚನ ಕಂಠಪಾಠ, ವಚನ ರಸಪ್ರಶ್ನೆ ಮತ್ತು ಶರಣರ ಚಿತ್ರಕಲಾ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕೈಗೊಳ್ಳಲಾಯಿತು. ಉಪನ್ಯಾಸಕ ರಾಮಣ್ಣ ಸುತಾರ ನಿರೂಪಿಸಿದರು. ಅಪ್ಪಾಸಾಬ ತೀರ್ಥೆ ವಂದಿಸಿದರು.
Comments are closed.