ಆಳಂದ: ತಾಲೂಕು ಆಡಳಿತದಿಂದ ನಡೆದ ಡಿ. ದೇವರಾಜ ಅರಸ್ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗ್ರೇಡ್-2 ತಹಸೀಲ್ದಾರ ಬಿ.ಜಿ.ಕುದರಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಆಳಂದ: ತಾಲ್ಲೂಕು ಆಡಳಿತ ಆಶ್ರಯದಲ್ಲಿ ಬುಧವಾರ ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಆಡಳಿತ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗ್ರೇಡ್–2 ತಹಸೀಲ್ದಾರ ಪ್ರಕಾಶ ಕುದರಿ ಉದ್ಘಾಟಿಸಿದರು. ಉಪನ್ಯಾಸಕ ಸಂಜಯ ಪಾಟೀಲ ಅವರು ಉಪನ್ಯಾಸ ನೀಡುತ್ತಾ, ದೇವರಾಜ ಅರಸು ಅವರ ಭೂ ಸುಧಾರಣೆ, ಹಾವನೂರು ಆಯೋಗ ಮತ್ತು ಶೈಕ್ಷಣಿಕ ಕ್ರಾಂತಿ ಕುರಿತು ವಿಶ್ಲೇಷಿಸಿ, “ಅವರ ಆದರ್ಶಗಳು ಇಂದಿಗೂ ಹಿಂದುಳಿದ ಸಮಾಜಕ್ಕೆ ದಾರಿ ದೀಪ” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪಶು ಸಂಗೋಪನ ಇಲಾಖೆಯ ಡಾ. ಯಲ್ಲಪ್ಪ ಇಂಗಳೆ, ಗೊಲ್ಲರ ಸಮಾಜ ಮುಖಂಡ ಯಲ್ಲಪ್ಪ ಬೊರುಟಿ, ಹಿಂದುಳಿದ ವರ್ಗಗಳ ಇಲಾಖೆಯ ಪ್ರಭಾರಿ ಕಲ್ಯಾಣಾಧಿಕಾರಿ ಅಡಿವೀರಪ್ಪ ಪತ್ತಾರ, ಸುನಿತಾ ಗೋಪಿ ರೆಡ್ಡಿ, ಎಫ್ಡಿಎ ಶಾಂತಾಬಾಯಿ, ಗಜಾನಂದ ಬುಕ್ಕಾ, ವಾರ್ಡನ ಪ್ರಕಾಶ, ಕವಿತಾ ಬಟಗೇರಿ, ಜನಾಬಾಯಿ ಕೋಟಗರ್, ಪ್ರದೀಪ ಶರಿಕಾರ, ಶಾಂತಪ್ಪ ಕೋರೆ, ಮತ್ತಿತರ ಉಪಸ್ಥಿತರಿದ್ದರು.
ಕಲಾವಿದ ಶಿವಶರಣಪ್ಪ ಪೂಜಾರಿ ಹಾಗೂ ಬಸವರಾಜ ಆಳಂದ ಸಂಗೀತ ಕಾರ್ಯಕ್ರಮದ ಮೂಲಕ ಸಂಭ್ರಮ ಹೆಚ್ಚಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರತಿಭಾವಂತ ಹತ್ತು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರರು, ಹಿಂದುಳಿದ ವರ್ಗ ಇಲಾಖೆಯ ಅಧಿಕಾರಿಗಳು, ಶಾಸಕರು, ತಾಒಂ ಇಒ, ಡಿವೈಎಸ್ಪಿ, ಪುರಸಭೆ ಅಧ್ಯಕ್ಷ ಅಧಿಕಾರಿಗಳು ಸೇರಿ ಆಮಂತ್ರಿತರು ಗೈರಾಗಿದ್ದರು.
Comments are closed.