ಆಳಂದ: ತಾಲೂಕು ಆಡಳಿತಸೌಧ ಆವರಣದಲ್ಲಿನ ಆನ್‍ಲೈನ್ ಸೆಂಟರ್‍ಗೆ ಬೆಂಕಿ ಉರಿದು ಸಾಮಗ್ರಿಗಳು ಸುಟ್ಟು ಹಾನಿಯಾಗಿವೆÉ.
ಆಳಂದ: ತಾಲೂಕಿನ ಮಿನಿ ವಿಧಾನಸೌಧದ ಆವರಣದಲ್ಲಿರುವ ವೈಷ್ಣವಿ ಆನ್‍ಲೈನ್ ಸೆಂಟರ್‍ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳು ಹಾನಿಗೊಳಗಾಗಿವೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದ ಲ್ಯಾಮಿನೇಷನ್ ಮಷೀನ್, ಎರಡು ಕಂಪ್ಯೂಟರ್‍ಗಳು, ಜೆರಾಕ್ಸ್ ಮಷೀನ್, ಪ್ರಿಂಟರ್, ಜನರೇಟರ್ ಬ್ಯಾಟರಿ ಹಾಗೂ ಟೇಬಲ್‍ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಆನ್‍ಲೈನ್ ಸೆಂಟರ್‍ನ ಮಾಲೀಕ ಅಂಬರೀಶ್ ದೇವನೂರ ಅವರು ಈ ಕುರಿತು ಮಾಹಿತಿ ನೀಡಿದ್ದು, ಒಟ್ಟು 3 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
Comments are closed.