ಆಳಂದ ತಾಲೂಕಿನಲ್ಲಿ ಅಭಿವೃದ್ಧಿ ಎಂಬ ಭಾಷಣದ ಸರಕನ್ನು ಇಟ್ಟುಕೊಂಡು ಶಾಸಕ ಬಿ ಆರ್ ಪಾಟೀಲ ಮತ್ತು ಅವರ ಬೆಂಬಲಿಗರು ಲೂಟಿಗೆ ಇಳಿದಿದ್ದಾರೆ ಎಂದು ತಡಕಲ ಗ್ರಾ.ಪಂ ಅಧ್ಯಕ್ಷೆ ನಾಗಮ್ಮ ಜಯಾನಂದ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಬಿ ಆರ್ ಪಾಟೀಲ ಅಭಿವೃದ್ಧಿಯ ವಿರೋಧಿ ಎಂದು ಸ್ವಪಕ್ಷದ ಅನೇಕ ಸಚಿವ, ಶಾಸಕರೇ ಹೇಳುತ್ತಿದ್ದಾರೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ?. ಅಲ್ಲದೇ ಸ್ವತ: ಶಾಸಕ ಬಿ ಆರ್ ಪಾಟೀಲರ ಸ್ವಂತ ಗ್ರಾಮ ಸರಸಂಬಾ ಗ್ರಾಮಕ್ಕೆ ಎಷ್ಟು ದಿನಗಳಿಗೊಮ್ಮೆ ನೀರು ಬರುತ್ತದೆ ಎಂದು ಆ ಗ್ರಾಮದ ಗ್ರಾ.ಪಂ ಸದಸ್ಯರು, ಮಾಜಿ ತಾ.ಪಂ ಸದಸ್ಯರು ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು ಸ್ವಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಎರಡುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಶಾಸಕ ಬಿ ಆರ್ ಪಾಟೀಲ ಆಳಂದ ಮತಕ್ಷೇತ್ರಕ್ಕೆ ಸರ್ಕಾರದಿಂದ ತಂದಿರುವ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ. ರೈತರ ದೀರ್ಘಕಾಲಿಕ ಸಮಸ್ಯೆಯಾದ ಹೊಲಗಳಿಗೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾದಾಗ ಅದಕ್ಕೆ ತಡೆಯೊಡ್ಡಿದವರು ಯಾರು?. ತಾಲೂಕಿನ ವಿವಿಧ ಗ್ರಾಮಗಳಿಗೆ ಮಂಜೂರಾದ ಸ್ಮಾರ್ಟ್ ಸ್ಕೂಲ್ ಯೋಜನೆಗಳನ್ನು ಬದಲಾಯಿಸಿದ್ದು ಏಕೆ?. ಆಳಂದ ತಾಲೂಕಿಗೆ ಐಟಿಐ ಕಾಲೇಜು ಮಂಜೂರಿ ಮಾಡಿಸಿ ಟಾಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೌಶಲ್ಯ ಕೇಂದ್ರ ಸ್ಥಾಪಿಸಲು ಮುಂದಾದಾಗ ಅದಕ್ಕೆ ತಡೆಯೊಡ್ಡಿದವರು ಯಾರು?. ಎಂದು ಕೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಳಂದ ತಾಲೂಕಿಗೆ ಮಂಜೂರಾದ ಕೆರೆಗಳನ್ನು ಬದಲಾಯಿಸಿದ್ದು ಏಕೆ?. ಕೆರೆ ಕಾಮಗಾರಿಗಳನ್ನು ಬದಲಾಯಿಸಿ ನಾಲಾ ಹೂಳೆತ್ತುವುದು ಹಾಗೂ ನಾಲಾ ಸುಲಿಯುವ ಕಾಮಗಾರಿ ಮಾಡುತ್ತಿರುವುದು ಯಾಕಾಗಿ?. ಒಂದು ಕೆರೆ ಕಟ್ಟಿದರೆ ಅದು ನೂರಾರು ವರ್ಷ ಬಾಳುತ್ತದೆ ಅದರಿಂದ ನೂರಾರು ಏಕರೆಗೆ ನೀರಾವರಿ ಲಭಿಸುತ್ತದೆ ಆದರೂ ತಾವು ಇದರ ಬಗ್ಗೆ ಮುತುರ್ವಜಿ ವಹಿಸುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಅಮರ್ಜಾ ತುಂಬಿಸುವ ಯೋಜನೆಯಲ್ಲಿ ಬಿಟ್ಟು ಹೋಗಿದ್ದ 8 ಕೆರೆಗಳನ್ನು ಸೇರಿಸಿ ಅದಕ್ಕೆ ಹೆಚ್ಚುವರಿ 50 ಕೋಟಿ ಅನುದಾನ ಮಂಜೂರಿ ಮಾಡಿಸಿದ್ದೇ ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಅವರು ಎಂದು ತಿಳಿಸಿದ್ದಾರೆ.
2013 ರಿಂದ 2018ರವರೆಗೆ ಶಿರಪೂರ ಮಾದರಿಯಲ್ಲಿ ಮಾಡಿದ ಕಾಮಗಾರಿಗಳ ಸ್ಥಳಗಳಲ್ಲಿಯೇ ಈಗ ಮತ್ತೆ ಕಾಮಗಾರಿ ಮಾಡುತ್ತೀದ್ದೀರಿ ಇದು ಹಣ ಎತ್ತುವ ಹುನ್ನಾರವಲ್ಲವೇ?.
ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಾಗರಾಜ ಪಾಟೀಲ ಅವರಿಗೆ ತೊಂದರೆ ನೀಡುತ್ತಿರುವುದು ಏತಕ್ಕೆ?. ಸರಸಂಬಾದ 8 ಜನರಿಗೆ ಪರಿಹಾರದ ಹಣ ನೀಡಿ ಕೇವಲ ಇವರೊಬ್ಬರಿಗೆ ಪರಿಹಾರ ನೀಡದೇ ಕಾಮಗಾರಿ ಮಾಡುತ್ತಿರುವುದು ಯಾಕೆ?. ಇದು ದ್ವೇಷದ ರಾಜಕಾರಣವಲ್ಲವೇ?. ನಾಗರಾಜ ಪಾಟೀಲ ಅವರ ಪತ್ನಿ ವಿಷಯ ತಿಳಿದು ಆಘಾತಗೊಂಡು ಜೀವನ್ಮರಣದ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿರುವುದು ತಮಗೆ ತಿಳಿದಿಲ್ಲವೇ?.
ಆಳಂದ ತಾಲೂಕಿನಲ್ಲಿ ಕಳೆದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ 186 ಕೋಟಿ ರೂ. ಖರ್ಚು ಮಾಡಲಾಗಿದೆ. ಶಾಲೆಯ ಭೌತಿಕ ಪರಿಸರ ಉತ್ತಮವಾಗಿಸಲು ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಶಾಲಾ ಕಾಲೇಜುಗಳ ತರಗತಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಶೌಚಾಲಯ, ಸ್ಮಾರ್ಟ ಕ್ಲಾಸ್ ಅಳವಡಿಕೆ, ಬೆಂಚ್, ಡೆಸ್ಕ್ ಪೂರೈಕೆ ಸೇರಿದಂತೆ ಅನೇಕ ಸಂಪನ್ಮೂಲ ಒದಗಿಸಲಾಗಿದೆ. ಐತಿಹಾಸಿಕ ಎನ್ನುವಂತೆ 400 ತರಗತಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
Prev Post
Comments are closed.