ನ್ಯಾಯ ವಿಧಾನದಲ್ಲಿ ಹೊಸ ಕಾನೂನುಗಳ ಅರಿವು ಅಗತ್ಯ: ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಸಲಹೆ
ಆಳಂದನಲ್ಲಿ ಕಾನೂನು ಕಾರ್ಯಾಗಾರ ಸಮಾರೋಪ
ಆಳಂದ: ಪಟ್ಟಣದ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾನೂನು ಕಾರ್ಯಾಗಾರ ಸಮಾರೋಪದಲ್ಲಿ ಕಲಬುರಗಿ ಹೈಕೋರ್ಟ್ ನ್ಯಾಯಾಧೀಶ ಶ್ರೀಶಾನಂದ ಮಾತನಾಡಿದರು.
ಆಳಂದ: ಭಾರತೀಯ ಸಾಕ್ಷಿ ಅಧಿನಿಯಮ–2023 ಮತ್ತು “ಪಾರ್ಟಿಷನ್ ಇನ್ ಮೆಮೋಡಿಂ” ಕಾಯ್ದೆಗಳ ತಾತ್ಪರ್ಯವನ್ನು ನ್ಯಾಯಮೂರ್ತಿಗಳು ಮತ್ತು ನ್ಯಾಯವಾದಿಗಳು ಆಳವಾಗಿ ಅಧ್ಯಯನ ಮಾಡಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಲು ಮತ್ತು ದೇಶದ ಕಾನೂನು ವ್ಯವಸ್ಥೆಗೆ ತಮ್ಮ ಕೊಡುಗೆ ನೀಡಬೇಕು ಎಂದು ಕಲಬುರಗಿಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎಸ್. ಶ್ರೀಶಾನಂದ ಹೇಳಿದರು.
ಪಟ್ಟಣದ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಮತ್ತು ಸ್ಥಳೀಯ ವಕೀಲರ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಭಾರತೀಯ ಸಾಕ್ಷಮ ಅಧಿನಿಯಮ–2023 ಹೊಸದಾಗಿ ಕಾನೂನು ಜಾರಿಗೆ ಬರುವ ಮೂಲಕ ಸಾಕ್ಷ್ಯಗಳ ನಿರ್ವಹಣೆಗೆ ಮತ್ತು ಆಸ್ತಿ ವಿಭಜನೆಗೆ ಸ್ಪಷ್ಟತೆ, ನ್ಯಾಯ ಮತ್ತು ನಂಬಿಕೆಯನ್ನು ತಂದಿದೆ. ಹಳೆಯ ಕಾನೂನುಗಳ ಮಿತಿಗಳನ್ನು ಹೊಸ ಕಾನೂನು ಸರಿಪಡಿಸಿದ್ದು, ನೊಂದವರಿಗೆ ಆಶಾಕಿರಣವಾಗಿದೆ ಎಂದು ಅವರು ಹೇಳಿದರು.
ನ್ಯಾಯಮೂರ್ತಿಗಳು ಮತ್ತು ವಕೀಲರು ಕೇವಲ ಕಲಿಯುವುದಕ್ಕೆ ತೃಪ್ತರಾಗದೇ ಹೊಸ ಕಾನೂನುಗಳ ತಾಂತ್ರಿಕತೆಗಳನ್ನೂ ಅಧ್ಯಯನ ಮಾಡಿ, ನ್ಯಾಯವಿಧಾನದಲ್ಲಿ ಗುಣಮಟ್ಟದ ಸುಧಾರಣೆಗಾಗಿ ಶ್ರಮಿಸಬೇಕು, ಹಳೆಯ ನಿಯಮಗಳ ಅವ್ಯವಸ್ಥೆಗಳನ್ನು ಉದಾಹರಣೆಗಳೊಂದಿಗೆ ತೋರಿಸಿ, ಹೊಸ ನಿಯಮಗಳು ಹೇಗೆ ಪರಿಣಾಮಕಾರಿಯಾಗಿವೆ ಎಂಬುದನ್ನೂ ವಿವರಿಸಿದರು.
ಭಾರತೀಯ ದಂಡ ಸಂಹಿತೆ (IPಅ) ಮತ್ತು ಗೃಹ ಭದ್ರತಾ ಸಂಹಿತೆ (ಅಡಿPಅ)ಯ ಸ್ಥಾನದಲ್ಲಿ ಬಂದಿರುವ ಭಾರತೀಯ ನ್ಯಾಯ ಸಂಹಿತೆ (ಃಓS) ಮತ್ತು ಭಾರತೀಯ ನ್ಯಾಯ ಪ್ರಕ್ರಿಯೆ ಸಂಹಿತೆ (ಃಓSS) ಕಾನೂನುಗಳ ಬಗ್ಗೆಯೂ ವಿವರಿಸಲಾಯಿತು.
ಈ ಕಾನೂನುಗಳು ಭಾರತದ ಸ್ವಾಭಿಮಾನ ಮತ್ತು ಸಾಂಸ್ಕøತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂತಹ ದೇಶೀಯ ಕಾನೂನುಗಳಾಗಿದ್ದು, ಜನರ ಜೀವನದಲ್ಲಿ ಸುಧಾರಣೆ ತರುವ ಗುರಿಯನ್ನು ಹೊಂದಿದೆ. ಃಓS ಭಾರತೀಯ ಸಮಾಜದ ಆಧುನಿಕ ಅಗತ್ಯಗಳಿಗೆ ತಕ್ಕಂತೆ ರಚಿಸಲಾಗಿದ್ದು, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಆರ್ಥಿಕ ಅಪರಾಧಗಳು, ಮತ್ತು ಸೈಬರ್ ಅಪರಾಧಗಳಂತಹ ಇತ್ತೀಚಿನ ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ. ಃಓSS ಒಂದೆಡೆಯಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳನ್ನು ವೇಗವರ್ಧಿಸುವುದರ ಮೂಲಕ ಶೀಘ್ರ ನ್ಯಾಯ ಒದಗಿಸುತ್ತದೆ ಮತ್ತು ಇನ್ನೊಂದೆಡೆಯಲ್ಲಿ ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಾತ್ರೀ ಮಾಡುತ್ತದೆ ಎಂದು ಅವರು ಹೇಳಿದರು.
ಇವುಗಳು ಜನರಿಗೆ ಸುಲಭವಾಗಿ ತಲುಪುವಂತಹ ಆನ್ಲೈನ್ ಫರಿಯಾದ ದಾಖಲು ವ್ಯವಸ್ಥೆಯಂತಹ ಆಧುನಿಕ ತಂತ್ರಜ್ಞಾನವನ್ನು ಸೇರಿಸಿಕೊಂಡಿವೆ, ಇದು ಗ್ರಾಮೀಣ ಪ್ರದೇಶಗಳಲ್ಲಿಯೂ ನ್ಯಾಯವನ್ನು ಸಮೀಪಿಸುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಈ ಕಾನೂನುಗಳು ಭ್ರμÁ್ಟಚಾರವನ್ನು ಕಡಿಮೆ ಮಾಡುವ ಮತ್ತು ಪೆÇಲೀಸ್ ಠಾಣೆಗಳಲ್ಲಿ ಜನರ ಆತಂಕವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ದೇಶದ ಸ್ವಾಯತ್ತತೆಯನ್ನು ಪ್ರತಿಬಿಂಬಿಸುವ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಭರವಸೆಯನ್ನು ನೀಡುತ್ತವೆ ಎಂದು ಹೇಳೀದರು.
ಸ್ವಾತಂತ್ರ್ಯದ ನಂತರ ಈ ಬದಲಾವಣೆಗೆ ತೀರಾ ದೀರ್ಘಕಾಲ ತೆಗೆದುಕೊಂಡದ್ದು ಏಕೆ ಎಂಬುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ಕಾರ್ಯಗಾರದಲ್ಲಿ ಮಹಿಳಾ ವಕೀಲರ ಸಹಭಾಗಿತ್ವಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಈ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಪ್ರಶಂಸೆ ಸಲ್ಲಿಸಿದರು. ಪ್ರಕರಣದ ಸಾಕ್ಷ್ಯಗಳಿಗಾಗಿ ಆಡಿಯೋ-ವೀಡಿಯೋ ಬಳಕೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಎಲ್ಲಾ ಪೆÇಲೀಸ್ ಠಾಣೆಗಳಲ್ಲಿ ಇಮೇಲ್ ಐಡಿಗಳನ್ನು ಪ್ರದರ್ಶಿಸಿ, ಆನ್ಲೈನ್ ಈIಖ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು. ಇದರೊಂದಿಗೆ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಉಲ್ಲೇಖವನ್ನು ಮಾಡಿ, “ನ್ಯಾಯದ ವಿರುದ್ಧ ಒಂದು ಮೌನ ಪ್ರೇಕ್ಷಕನಾಗಬೇಡಿ. ಸಾಹಸ ಮತ್ತು ಸತ್ಯದಿಂದ ಧ್ವನಿ ಎತ್ತಿ ಇದು ನಿಜವಾದ ನಾಗರಿಕರ ಮಾರ್ಗ” ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ, ಹಿರಿಯ ಶ್ರೇಣಿ ನ್ಯಾಯಾಧೀಶೆ ಸುಮನ್ ಚಿತ್ತರಗಿ, ಸಂಘದ ಕಾರ್ಯದರ್ಶಿ ಬಿ.ಟಿ. ಸಿಂಧೆ ಉಪಸ್ಥಿತರಿದ್ದರು. ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ್ ರಾಠೋಡ ಅಧ್ಯಕ್ಷತೆ ವಹಿಸಿದರು.
ನ್ಯಾಯವಾದಿ ಶಿವಶಂಕರ ಮುನೋಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಹಿರಿಯ, ಕಿರಿಯ ನ್ಯಾಯವಾದಿಗಳು ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ವಿವಿಧ ವಿಷಯಗಳ ಗಂಭೀರ ಚರ್ಚೆ ನೆಡದವು.
Comments are closed.