Shubhashaya News

‘ಬಮೂಲ್’ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿಕೆ ಸುರೇಶ್ ಆಯ್ಕೆ

ಬಮೂಲ್ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿಕೆ ಸುರೇಶ್ ಅವರು ಇದೀಗ ಆಯ್ಕೆಯಾಗಿದ್ದಾರೆ. ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್ ಆಯ್ಕೆಯಾಗಿದ್ದಾರೆ ಒಕ್ಕೂಟದ ಸದಸ್ಯರು ಹಾಗೂ ಚುನಾಯಿತರಿಂದ ಡಿಕೆ ಸುರೇಶ್ ಆಯ್ಕೆಯಾಗಿದ್ದಾರೆ.

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸುರೇಶ್ ಇಂದು ನಾಮಪತ್ರ ಸಲ್ಲಿಸಲಿದ್ದರು. ಬೆಂಗಳೂರು ಡೇರಿ ವೃತ್ತದಲ್ಲಿರುವ ಕಚೇರಿಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಒಟ್ಟು 14 ನಿರ್ದೇಶಕರನ್ನು ಬಮೂಲ್ ಒಳಗೊಂಡಿದೆ.ಈ ವೇಳೆ ಬಮೂಲ್ ಕಚೇರಿಯ ಬಳಿ ಸಿಹಿ ಹಂಚಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಡಿಕೆ ಸುರೇಶ್ ಅವರಿಗೆ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

Comments are closed.

Don`t copy text!